ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ ನಿರ್ಮೂಲನೆ- ಸಹಕಾರ ಅಗತ್ಯ: ಮಲ್ಲಿಕಾರ್ಜುನ

Last Updated 20 ಜೂನ್ 2021, 2:31 IST
ಅಕ್ಷರ ಗಾತ್ರ

ಗಂಗಾವತಿ: ‘ಕ್ಷಯ ಮುಕ್ತ ಗಂಗಾವತಿ ನಗರದ ಕನಸು ನನಸಾಗಬೇಕಾದರೆ ಅದಕ್ಕೆ ಖಾಸಗಿ ವೈದ್ಯರೂ ಕೈಜೋಡಿಸಬೇಕು’ ಎಂದು ಕ್ಷಯರೋಗ ವಿಭಾಗದ ಮೇಲ್ವಿಚಾರಕ ಮಲ್ಲಿಕಾರ್ಜುನ ಹೇಳಿದರು.

ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿದ ಅವರು,‘ತಮ್ಮ ಆಸ್ಪತ್ರೆಗೆ ಬರುವ ಸಂಶಯಾಸ್ಪದ ಕ್ಷಯರೋಗಿಗಳನ್ನು ಹಾಗೂ ದೃಢಪಟ್ಟ ರೋಗಿಗಳ ಕುರಿತು ಸರ್ಕಾರಕ್ಕೆ ವರದಿ ಮಾಡುವ ಮೂಲಕ ವೈದ್ಯರು ಸಹಕರಿಸಬೇಕು’ ಎಂದರು.

ನಂತರ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಹುಸೇನ್ ಬಾಷಾ ಕಫ ಸಂಗ್ರಹಿಸಲು ಬಳಸುವ ಫಾಲ್ಕನ್ ಟ್ಯೂಬ್ ಮತ್ತು ಪ್ರಯೋಗಶಾಲಾ ನಮೂನೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಮೂಲಕ ಇಲಾಖೆಗೆ ಸಹಕರಿಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT