ಕಾರಟಗಿ: ಸಮೀಪದ ಚನ್ನಳ್ಳಿ ಗ್ರಾ.ಪಂ ವ್ಯಾಪ್ತಿಯ ಕಸ್ತೂರೆಪ್ಪಕ್ಯಾಂಪ್ ಬಳಿಯ ಜಮಕಲಗುಡ್ಡಕ್ಕೆ ಹತ್ತಿದ್ದ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದು, ಭಾರಿ ಅನಾಹುತ ತಪ್ಪಿದ ಬಗ್ಗೆ ವರದಿಯಾಗಿದೆ.

‘ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಸಿದ್ರಾಂಪುರದ ಚಂದ್ರೇಗೌಡ ಎಂಬುವವರು ಮಾಹಿತಿ ನೀಡಿದ್ದರಿಂದ ಗಂಗಾವತಿಯ 1, ಪಟ್ಟಣದ 2 ವಾಹನಗಳಲ್ಲಿ 15 ಸಿಬ್ಬಂದಿ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದೆವು. ಇಲ್ಲದಿದ್ದರೆ ಪಕ್ಕದಲ್ಲಿದ್ದ ಮೂರಾರ್ಜಿ ವಸತಿ ಶಾಲೆ, 15 ಗುಡಿಸಲು, 6 ತಗಡಿನ ಶೆಡ್ಗಳು, ಹುಲ್ಲಿನ ಬಣವೆಗಳು, ಮಾವು ಹಾಗೂ ಲಿಂಬೆ ತೋಟ ಭಾರಿ ಹಾನಿಗೀಡಾಗುತ್ತಿದ್ದವು’ ಎಂದು ಠಾಣಾಧಿಕಾರಿ ದಯಾನಂದಗೌಡ ತಿಳಿಸಿದರು.

ಅಗ್ನಿ ಶಾಮಕ ಠಾಣೆಯ ಅಧಿಕಾರಿ ಆರ್. ಎಲ್. ಪೂಜಾರಿ, ಸಿಬ್ಬಂದಿ ಮಂಜುನಾಥ, ಶರಣಪ್ಪ, ಸುಗರಯ್ಯ, ಮಾನಪ್ಪ, ಪುಟ್ಟರಾಜು, ಶಿವಾನಂದ, ರಾಹುಲ್, ಯಂಕಪ್ಪ, ಮೈಬೂಬ್, ಕಿರಣ್ ಜೊತೆಗೆ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.