ಕಾರಟಗಿ: ರಸ್ತೆಯಲ್ಲಿದ್ದ ತಿಪ್ಪೆಗೆ ಬೆಂಕಿ ಹತ್ತಿಕೊಂಡು ಅದು ವ್ಯಾಪಿಸುತ್ತಿರುವುದನ್ನು ಹಾಗೂ ಪಕ್ಕದ ಹುಲ್ಲಿನ ಬಣಿವೆ ಅಗ್ನಿ ಅನಾಹುತಕ್ಕೀಡಾಗುವುದನ್ನು ತಪ್ಪಿಸಿದ ಘಟನೆ ತಾಲ್ಲೂಕಿನ ನಾಗನಕಲ್ ಬಳಿ ಬುಧವಾರ ಜರುಗಿದೆ.

ಆರಂಭದಲ್ಲಿ ತಿಪ್ಪೆಯೊಂದಕ್ಕೆ ಬೆಂಕಿ ಕಾಣಿಸಿಕೊಂಡು, ಪಕ್ಕದ ತಿಪ್ಪೆ, ಬಣಿವೆಗಳಿಗೆ ವ್ಯಾಪಿಸುವುದನ್ನು ಅರಿತ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಕಾಲಕ್ಕೆ ಆಗಮಿಸಿ, ಬೆಂಕಿ ನಂದಿಸಿ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಗ್ರಾಮದ ವೆಂಕಟೇಶ ಕೆಂಚನಗುಡ್ಡ ಪ್ರತಿಕ್ರಿಯಿಸಿ, ತ್ವರಿತವಾಗಿ ಅಗ್ನಿಶಾಮಕದ ದಳದವರು ಆಗಮಿಸಿ ಬೆಂಕಿ ನಂದಿಸದಿದ್ದರೆ, ಇತರ ಹುಲ್ಲಿನ ಬಣಿವೆಗೆ ಬೆಂಕಿ ತಾಗಿ ಹೆಚ್ಚು ಹಾನಿ ಸಂಭವಿಸುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿಯ ಶ್ರಮ ಸಾರ್ಥಕವಾಯಿತು ಎಂದರು.

ಅಗ್ನಿ ಶಾಮಕ ಠಾಣೆಯ ಅಧಿಕಾರಿ ದಯಾನಂದ ಗೌಡ ಸಿಬ್ಬಂದಿ ಹೊಸಗೇರಪ್ಪ, ಸೂಗೂರೇಶ್, ಮಲ್ಲಿಕಾರ್ಜುನ, ಉಮಾಕಾಂತ, ಮಂಜುನಾಥ ಹಾಗೂ ಗ್ರಾಮದ ಜಗದೀಶ್ ಹುಲಿಹೈದರ, ಭೋಗೇಶ್ ಸಂಕನಾಳ, ಬಸವರಾಜ್ ಬಸಾಪುರ, ಹನುಮಂತರೆಡ್ಡಿ ಮೆದಿಕಿನಾಳ ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.