ಬಿಸಿಯೂಟ ಕಾರ್ಯಕರ್ತರ ಪ್ರತಿಭಟನೆ

7

ಬಿಸಿಯೂಟ ಕಾರ್ಯಕರ್ತರ ಪ್ರತಿಭಟನೆ

Published:
Updated:
Deccan Herald

ಕೊಪ್ಪಳ: ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಜಿಲ್ಲಾ ಘಟಕದ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕನಿಷ್ಠ ಕೂಲಿ ಜಾರಿಗೆ ತರಬೇಕು. ಬಿಸಿಯೂಟ ಕಾರ್ಯಕರ್ತರಿಗೆ ಆರೋಗ್ಯ ವಿಮೆ ಜಾರಿಗೆ ತರಬೇಕು. ಅಡುಗೆ ತಯಾರಿಸುವಾಗ  ಅನಾಹುತ ಸಂಭವಿಸಿದರೆ  ಪರಿಹಾರ ನೀಡಬೇಕು. ಬಿಸಿಯೂಟ ಕಾರ್ಯಕರ್ತರಿಗೆ  ವರ್ಷಕ್ಕೆ ಹೆಚ್ಚುವರಿಯಾಗಿ 10 ದಿನ ಸಂಬಳ ಸಹಿತ ರಜಾ ನೀಡಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ಯೋಜನೆ ಅಡಿ ದಾಸ್ತಾನು ಕೊಠಡಿ ನಿರ್ಮಿಸಬೇಕು. ರಾಜ್ಯದಾದ್ಯಂತ ಇರುವ ಖಾಸಗಿ ಶಾಲೆಗಳಿಗೂ ಅಕ್ಷರ ದಾಸೋಹ ಯೋಜನೆಯನ್ನು ವಿಸ್ತರಿಸಬೇಕು. ಇತರ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆದ ಸಂದರ್ಭದಲ್ಲಿ ಅರ್ಹತೆಗೆ ಅನುಗುಣವಾಗಿ ಬಿಸಿಯೂಟ ತಯಾರಕರಿಗೆ ಆದ್ಯತೆ ನೀಡಬೇಕು. ಬಿಸಿಯೂಟ ತಯಾರಕರಿಗೆ ವೈದ್ಯಕೀಯ, ಸಮವಸ್ತ್ರ, ಅಂತ್ಯೋದಯ ಕಾರ್ಡ್,  ನಿವೇಶನ, ಆಶ್ರಯ ಮನೆ  ಸೌಲಭ್ಯ ಕಲ್ಪಿಸಬೇಕು.  ಎಲ್ಲ ಬಿಸಿಯೂಟ ತಯಾರಕರನ್ನು  ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಬಳಿಕ ತಹಶೀಲ್ದಾರ್‌ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ಬಸವರಾಜ ಶೀಲವಂತರ, ಕಾರ್ಯದರ್ಶಿ ಕಮಲಾದೇವಿ ದೊಡ್ಡಮನಿ, ಅಧ್ಯಕ್ಷೆ ಪುಷ್ಪಾ ಮೇಸ್ತ್ರಿ, ವಿಠ್ಠಪ್ಪ ಗೋರಂಟ್ಲಿ, ಗಾಳೆಪ್ಪ ಮುಂಗೋಲಿ, ನನ್ನಸಾಬ್ ನೀಲಿ, ಮಕಬುಲ್ ರಾಯಚೂರು, ಶಿವಪ್ಪ ಹಡಪದ, ಸುಮಾ ಅಬ್ಬಿಗೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !