ಮಂಗಳವಾರ, ಸೆಪ್ಟೆಂಬರ್ 28, 2021
24 °C
ಸವಿತಾ ಸಮಾಜದ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ ವಿತರಣೆ

‘ಸರ್ಕಾರದ ಯೋಜನೆ ಸದ್ಬಳಕೆ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಪಟ್ಟಣದಲ್ಲಿ ಸವಿತಾ, ಹಡಪದ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ₹25 ಲಕ್ಷ ಅನುದಾನವನ್ನು ಸರ್ಕಾರದಿಂದ ದೊರಕಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.‌

ಪಟ್ಟಣದ ಎಲ್‍ವಿಟಿ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆಯಿಂದ ಸವಿತಾ, ಹಡಪದ ಸಮಾಜದ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಶ್ರಮಿಕ ಸಮಾಜದವರು ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿ ಸಾಧಿಸಬೇಕು ಎಂದರು.

ಸಮಾಜದ ಪ್ರಮುಖರಾದ ಮಹಾದೇವಪ್ಪ ಹಡಪದ, ರಾಮಾಂಜನೇಯ ಮಾತನಾಡಿ, ಕ್ಷೌರಿಕ ವೃತ್ತಿಯನ್ನು ಯಾರೂ ಕೀಳಾಗಿ ಕಾಣದೇ, ಗೌರವಯುತವಾಗಿ ಪರಿಗಣಿಸಿ, ಪ್ರೋತ್ಸಾಹಿಸಬೇಕು. ಸಮಾಜದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿ, ಸಮಾಜಮುಖಿ ಬದುಕು ರೂಪಿತ ವಾಗುವಂತೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಾಲೋಣಿ ಪ್ರಮುಖರಾದ ಹೊನ್ನೂರಪ್ಪ ಮಡಿವಾಳರ, ಜಿ. ತಿಮ್ಮನಗೌಡ ಮಾತನಾಡಿ, 12ನೇ ಶತಮಾನದಲ್ಲೇ ಹಡಪದ ಅಪ್ಪಣ್ಣ ಬಸವಣ್ಣರ ಆಪ್ತರಾಗಿ ಕೆಲಸ ನಿರ್ವಹಿಸಿದ್ದರು. ಅಂದಿನಿಂದಲೂ ಸಮಾಜವನ್ನೂ ಎಲ್ಲರೂ ಗೌರವದಿಂದ ಕಾಣುತ್ತಿದ್ದಾರೆ. ಶ್ರಮಿಕರ ಬದುಕಿಗೆ ಎಲ್ಲಾ ವರ್ಗದವರೂ ಗೌರವ ನೀಡಿ, ಪ್ರೋತ್ಸಾಹಿಸಬೇಕು ಎಂದುತಿಳಿಸಿದರು.

ವಿಶೇಷ ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ ಮುಸ್ಟೂರ, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರಗೌಡ ಯರಡೋಣಾ, ಬಿಜೆಪಿ ಬ್ಲಾಕ್ ಅಧ್ಯಕ್ಷ ಚಂದ್ರಶೇಖರ ಮುಸಾಲಿ, ಸಮಾಜದ ತಾಲ್ಲೂಕು ಅಧ್ಯಕ್ಷ ಶಿವಕುಮಾರ ಕಾಶೀನಾಥ ಹಡಪದ ಪ್ರಮುಖರಾದ ಚನ್ನಬಸಪ್ಪ ಸುಂಕದ, ಶಿವಶರಣೇಗೌಡ ಯರಡೋಣಾ, ಬಿ. ಕಾಶಿವಿಶ್ವನಾಥ, ತಿಮ್ಮನಗೌಡ, ಉಮೇಶ್ ಸಜ್ಜನ್, ಮಂಜುನಾಥ ಮಸ್ಕಿ, ಅಮರೇಶ್ ಪಾಟೀಲ, ನಿರುಪಾದಿ ಮಕಾಶಿ, ಹಿರೇಬಸಪ್ಪ ಸಜ್ಜನ್‌, ಶರರಣಪ್ಪ ಗದ್ದಿ, ಪ್ರಭುರಾಜ್‌ ಬೂದಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.