ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ: ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ನೋಟುಗಳು ಪತ್ತೆ

₹11.99 ಲಕ್ಷ ಸಂಗ್ರಹ
Last Updated 29 ಏಪ್ರಿಲ್ 2022, 12:53 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡಲಾಯಿತು.

ತಹಶೀಲ್ದಾರ್ ಯು.ನಾಗರಾಜ, ಗ್ರೇಡ್‌-2 ತಹಶೀಲ್ದಾರ್ ವಿ.ಎಚ್.ಹೊರಪೇಟಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು.

ಒಟ್ಟು ₹11,99,470 (ಏ.1ರಿಂದ ಏ.29ರವರೆಗೆ) ಸಂಗ್ರಹವಾಗಿದೆ. ಹುಂಡಿಯಲ್ಲಿ ಇಥೋಪಿಯಾ ದೇಶಕ್ಕೆ ಸೇರಿದ ಮೂರು ವಿದೇಶಿ ನೋಟುಗಳು ಪತ್ತೆಯಾಗಿವೆ. ಕಳೆದ ತಿಂಗಳು 30ರಂದು ಹುಂಡಿ ಹಣ ಎಣಿಕೆ ಮಾಡಲಾಗಿತ್ತು. ಆ ವೇಳೆ ಒಟ್ಟು ₹9,29,085 ಸಂಗ್ರಹವಾಗಿತ್ತು.

ತಹಶೀಲ್ದಾರ್ ಕಚೇರಿ ಸಿಬ್ಬಂದಿ ಅನಂತ ಜೋಶಿ, ಕೃಷ್ಣವೇಣಿ, ರವಿಕುಮಾರ್, ಶ್ರೀಕಂಠ, ಅನಿತಾ, ಮರಳಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಎಂ.ಡಿ ರಫಿ, ಗಾಯತ್ರಿ, ಕವಿತಾ, ಶ್ವೇತಾ, ಅನಿತಾ, ಪೂಜಾ, ಶಿವಮೂರ್ತಿ, ಮಂಜುನಾಥ.ಡಿ, ಪೂಜಾಗ್ರಾಲೆ, ಮಹಾಲಕ್ಷ್ಮಿ, ಸಾಣಾಪುರ ಪಿಕೆಜಿಬಿ ಬ್ಯಾಂಕ್‌ ಸಿಬ್ಬಂದಿ ರಾಜಶೇಖರ, ಸುನೀಲ್ ಹಾಗೂ ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT