ಕೊಪ್ಪಳ: ನಗರದ ವಾರ್ಡ್ ನಂ 12 ರ ಬಸವೇಶ್ವರ ನಗರದ ನಿವಾಸಿ, ಪುರಸಭೆ ಮಾಜಿ ಅಧ್ಯಕ್ಷ ಗವಿಸಿದ್ಧಪ್ಪ ಕಂದಾರಿ (80) ಗುರುವಾರ ಬೆಳಗಿನ ಜಾವ 3 ಗಂಟೆಗೆ ಕೊನೆಯುಸಿರೆಳೆದರು.

ಮೃತರಿಗೆ ಪತ್ನಿ ಶೇಖಮ್ಮ ಕಂದಾರಿ, ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ.

ವೃತ್ತಿಯಿಂದ ವಾಚ್ ರಿಪೇರಿ ಮಾಡುತ್ತಿದ್ದ ಗವಿಸಿದ್ದಪ್ಪ

ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಒಳ ಹೊರಗುಗಳ ಬಗ್ಗೆ ಅಪಾರವಾದ ತಿಳಿವಳಿಕೆ ಹೊಂದಿದ್ದರು.ಉತ್ತಮ ರಾಜಕೀಯ ವಿಶ್ಲೇಷಕರೂ ಆಗಿದ್ದರು.

ಕೊಪ್ಪಳದ ಹನುಮಂತಪ್ಪ ಅಂಗಡಿ ಅವರು ಅವಿಭಜಿತ ರಾಯಚೂರು ಜಿಲ್ಲೆಯ ಜನತಾದಳದ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ 1994ರಲ್ಲಿ ಜನತಾದಳದ ಪರಿಶಿಷ್ಟ ಜಾತಿ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದರು. 1998-2000ರವರೆಗೆ ಕೊಪ್ಪಳ ಪುರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಪುರಸಭಾಧ್ಯಕ್ಷರು, ಸದಸ್ಯರಾಗಿದ್ದ ದಿನಗಳಲ್ಲಿಯೂ ತಮ್ಮ ವೃತ್ತಿ ವಾಚ್ ರಿಪೇರಿ ಮಾಡುವುದನ್ನು ಅವರು ಮರೆತಿರಲಿಲ್ಲ.

ಪ್ರತಿದಿನ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ನಂತರ ಕೆಲಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು. ಕರಡಿ ಸಂಗಣ್ಣ ಶಾಸಕರು, ಸಂಸದರಾಗಿ ಆಯ್ಕೆಯಾಗುವಲ್ಲಿ ಶ್ರಮಿಸಿದ್ದರು. ಭಾರತೀಯ ಜನತಾ ಪಕ್ಷದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದರು. ಕನಕಗಿರಿ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಇವರ ಹೆಸರು ಮೂಂಚೂಣಿಯಲ್ಲಿತ್ತು. ಕೊಪ್ಪಳ ಜಿಲ್ಲಾ ಮಾದಿಗ ಸಮಾಜದ ಮುಖಂಡರಾಗಿ ಕೊಪ್ಪಳದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಗವಿಸಿದ್ಧಪ್ಪ ಕಂದಾರಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಸಿಂದೋಗಿ ರಸ್ತೆಯ ಘನತಾಜ್ಯ ನಿರ್ವಹಣೆ ಘಟಕದ ಪಕ್ಕದಲ್ಲಿರುವ ಅವರ ಕೃಷಿಭೂಮಿಯಲ್ಲಿ ನೇರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.