ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಪ್ರಮಾಣದ ನಿಧಿ ಸಂಗ್ರಹ

ಸಂಸದ ಸಂಗಣ್ಣ ಕರಡಿ, ಸಿ.ವಿ.ಚಂದ್ರಶೇಖರ್ ನೇತೃತ್ವದಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ
Last Updated 19 ಜನವರಿ 2021, 1:51 IST
ಅಕ್ಷರ ಗಾತ್ರ

ಕೊಪ್ಪಳ: ಹಿಟ್ನಾಳ ಮತ್ತು ಬಂಡಿಹರ್ಲಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸಂಸದ ಸಂಗಣ್ಣ ಕರಡಿ ಅವರು ಭಾಗಿಯಾಗಿ ಸೋಮವಾರ ನಿಧಿಸಂಗ್ರಹಿಸಿದರು.

ಹುಲಿಗಿ ಗ್ರಾಮದಲ್ಲಿ ಮಾನ್ಯ ಸಂಸದರು ಭಾಗಿಯಾದರು ಆಭಿಯಾನದಲ್ಲಿ ಅನೇಕರು ಉತ್ಸಾಹದಿಂದ ಪಾಲ್ಗೊಂಡು ನಿಧಿ ಸಮರ್ಪಣೆ ಮಾಡಿದರು. ಗ್ರಾಮದ ಟಿ.ಜನಾರ್ಧನ ಹುಲಿಗಿ ₹1 ಲಕ್ಷ,ಈರಣ್ಣ ಈಳಗೇರ ₹25 ಸಾವಿರ, ಶ್ರೀನಿವಾಸ ರೆಡ್ಡಿ ಹೊಸಪೇಟೆ ₹25 ಸಾವಿರ ಚೆಕ್ ಅನ್ನು ಸಂಸದರಿಗೆ ಹಸ್ತಾಂತರಿಸಿದರು.

ಹಿಟ್ನಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹೊಸ ನಿಂಗಾಪುರ ಗ್ರಾಮದಲ್ಲಿ ವೀರನಗೌಡ ಪಾಟೀಲ ₹2,1,000 ಚೆಕ್ ಅನ್ನು ಸಂಸದರಿಗ ಹಸ್ತಾಂತರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಫಾಲಾಕ್ಷಪ್ಪ ಗುಂಗಾಡಿ, ತಾಲ್ಲೂಕುಬಿಜೆಪಿ ಗ್ರಾಮೀಣ ಅಧ್ಯಕ್ಷ ಪ್ರದೀಪ ಹಿಟ್ನಾಳ, ಪರುಶುರಾಮ ನಾಯಕ್, ಪರುಶರಾಮ ಅಕ್ಕಸಾಲಿ, ಅನಿಲ್ ದೇಸಾಯಿ, ತ್ರಯಂಬಕ ಕೊಂಡಿ, ಬಸವರಾಜ ಗದ್ದಿಕೇರಿ, ರಾಘವೇಂದ್ರ ರೆಡ್ಡಿ, ವಿಶ್ವನಾಥ ಹಿರೇಮಠ, ಮಹೇಶ ಮಂಗಳೂರ, ಬಸವರಾಜ ಕರ್ಕಿಹಳ್ಳಿ, ವೀರಭದ್ರಯ್ಯ ಭೂಸನೂರಮಠ, ಪಂಪಯ್ಯ ಹಿರೇಮಠ, ಸತೀಶ್ ಪಾಟೀಲ, ಬಸವರಾಜ ಬಾರಕೇರ, ಮಂಜುನಾಥ ಪೂಜಾರ, ಶಿವಣ್ಣ ಇದ್ದರು.

ಕೊಪ್ಪಳದ ಕೋಟೆ-ಗೌರಿ ಅಂಗಳ ಪ್ರದೇಶದಲ್ಲಿ ಭಾನುವಾರ ಅಯೋಧ್ಯೆ ರಾಮಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಮುಖಂಡರಾದ ಅಪ್ಪಣ್ಣ ಪದಕಿ, ರವೀಂದ್ರ ವಕೀಲ, ರಾಮಣ್ಣ ಗುಡಿ, ಶ್ರೀನಿವಾಸ ಅಯಾಚಿತ್, ಪ್ರವೀಣ ಶಾನುಭೋಗ, ಉಮೇಶ ಕೊಪ್ಪಳ, ವಿರೂಪಾಕ್ಷಪ್ಪ, ದತ್ತು ವೈದ್ಯ ಇದ್ದರು.

‘ಭಕ್ತರು ದೇಣಿಗೆ ನೀಡಿ ಸಹಕರಿಸಿ’
ಕುಕನೂರು: ‍
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭಕ್ತರಿಂದ ನಿಧಿ ಸಂಗ್ರಹಿಸಲಾಗುವುದು. ಭಕ್ತರು ಇದಕ್ಕೆ ಸಹಕರಿಸಬೇಕು ಎಂದು ಶಾಸಕ ಹಾಲಪ್ಪ ಆಚಾರ್ಹೇಳಿದರು.

ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಮಮಂದಿರ ನಿರ್ಮಾಣ ಪ್ರಪಂಚವೇ ಕಂಡ ಕನಸು. ಪ್ರತಿಯೊಬ್ಬ ಭಾರತೀಯನ ಅಸ್ಮಿತೆಯೂ ಹೌದು. ಮಂದಿರ ನಿರ್ಮಾಣದ ಮೂಲಕ ಗಾಂಧೀಜಿಯವರ ರಾಮರಾಜ್ಯದ ಕನಸು ಈಡೇರಲಿ ಎಂದು ಆಶಿಸಿದರು.

ಆದರ್ಶ ಪುರುಷ ರಾಮನ ಮಂದಿರ ನಿರ್ಮಾಣವೆಂಬುದು ಪ್ರತಿಯೊಬ್ಬ ಹಿಂದುವಿನ ಸದಾಶಯ ಎಂದು ಅವರು ಹೇಳಿದರು.

ರಾಘವೇಂದ್ರರಾವ್ ದೇಸಾಯಿ, ಕಪ್ಪತ್ತಪ್ಪ ಅಂಗಡಿ, ನಾಗರಾಜ ಗಿರಡ್ಡಿ, ಪ್ರಭುಗೌಡ ಪಾಟೀಲ, ಯಮುನಪ್ಪ ಇಳಿಗೆರ, ಹನುಮಂತ ಬನ್ನಿಕೊಪ್ಪ, ಚಂದ್ರಶೇಖರ, ಮಲ್ಲಪ್ಪ ಮಾಸ್ತರ್ ಗುನ್ನಾಳ, ಶರಣಪ್ಪ ದೇವರಮನಿ, ಬಸವರಾಜ್ ರಾಜುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT