ಕುಷ್ಟಗಿ ರೈಲ್ವೆ ನಿಲ್ದಾಣದಲ್ಲಿನ ಪಾದಚಾರಿ ದಾರಿಯ ಪೇವರ್ಸ್‌ಗಳು ಕುಸಿದಿರುವುದು
ರೈಲ್ವೆ ಸಂಪರ್ಕ ಕಲ್ಪಿಸಿದರೆ ಈ ಭಾಗದ ಅಭಿವೃದ್ಧಿಗೆ ನೆರವಾಗುತ್ತದೆ. ಈ ವಿಷಯದಲ್ಲಿ ಸಂಸದರ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ
ವೀರೇಶ ಬಂಗಾರಶೆಟ್ಟರ ಸಾಮಾಜಿಕ ಕಾರ್ಯಕರ್ತ
ಕಾಮಗಾರಿ ಸ್ಥಗಿತಗೊಂಡಿಲ್ಲ ಬಾಕಿ ಇರುವ ಸಣ್ಣಪುಟ್ಟ ಕೆಲಸ ನಡೆಯುತ್ತಿದೆ. ಕಿತ್ತಿರುವ ಹಳಿಗಳ ಮರುಜೋಡಣೆ ಕೆಲಸ ಆರಂಭಗೊಳ್ಳಲಿದೆ
ಅಶೋಕ ಮುದಗೌಡರ ಎಇಇ ನೈಋತ್ಯ ರೈಲ್ವೆ
ಚುನಾವಣೆ ಪೂರ್ವದಲ್ಲಿ ಎಂಜಿನ್ ಬಂದು ಹೋಗಿದ್ದು ಬಿಟ್ಟರೆ ಬೇರೆ ಪ್ರಗತಿಯೇ ಇಲ್ಲ. ಕಾಮಗಾರಿ ಪೂರ್ಣಗೊಳಿಸಿ ರೈಲ್ವೆ ಸಂಪರ್ಕ ಕಲ್ಪಿಸಲು ನೈಋತ್ಯ ರೈಲ್ವೆ ಗಮನಹರಿಸಬೇಕಿದೆ
ಈರಣ್ಣ ಬಳಿಗಾರ ಹಿರಿಯ ನಾಗರಿಕ
ಕೆಲಸ ವಿಳಂಬ; ಸಂಸದರ ನಿರಾಸಕ್ತಿ
ಲೋಕಸಭೆ ಚುನಾವಣೆಯಲ್ಲಿ ಪುನಃ ಸ್ಪರ್ಧಿಸುವ ಇಚ್ಛೆ ಹೊಂದಿದ್ದ ಮಾಜಿ ಸಂಸದ ಸಂಗಣ್ಣ ಕರಡಿ ಜನರ ಮನ ಒಲಿಸಿಕೊಳ್ಳುವ ಭಾಗವಾಗಿ ಗದಗ ವಾಡಿ ರೈಲು ಮಾರ್ಗದ ಕಾಮಗಾರಿ ವಿಷಯದಲ್ಲಿ ಬಹಳಷ್ಟು ಮುತುವರ್ಜಿವಹಿಸಿ ಪ್ರತಿ ಹಂತದಲ್ಲೂ ಕಾಮಗಾರಿ ವೀಕ್ಷಿಸುತ್ತಿದುದನ್ನು ಈ ಭಾಗದ ಜನ ಗಮನಿಸಿದ್ದರು. ಪಟ್ಟುಹಿಡಿದು ರೈಲ್ವೆ ಎಂಜಿನ್ ಆದರೂ ಬಂದು ಹೋಗಿದ್ದರಲ್ಲಿ ಸಂಗಣ್ಣ ಅವರ ಶ್ರಮವನ್ನು ಅಲ್ಲಗಳೆಯುವಂತಿರಲಿಲ್ಲ. ಆದರೆ ಅವರು ಚುನಾವಣೆಗೆ ಅವರು ಸ್ಪರ್ಧಿಸಲಿಲ್ಲ ಚುನಾವಣೆ ನಂತರ ಕೆಲಸವೂ ಆಮೆಗತಿಯಲ್ಲಿ ಸಾಗುವಂತಾಯಿತು. ಹಾಲಿ ಸಂಸದ ರಾಜಶೇಖರ ಹಿಟ್ನಾಳ ಒಂದು ಬಾರಿಯೂ ರೈಲ್ವೆ ಕಾಮಗಾರಿಯ ಬಗ್ಗೆ ಗಮನಹರಿಸಿಲ್ಲ ಎಂದು ಪಟ್ಟಣದ ಬಸವರಾಜ ಪಾಟೀಲ ವೀರಣ್ಣ ಇತರರು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಹಲವು ದಿನಗಳಿಂದ ಸಂಪರ್ಕಿಸಿದರೂ ಸಂಸದ ರಾಜಶೇಖರ ಹಿಟ್ನಾಳ ದೂರವಾಣಿ ಕರೆ ಸ್ವೀಕರಿಸಲಿಲ್ಲ.