ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದಿಗೆ ಗಾಂಧಿ ಗ್ರಾಮ ಪುರಸ್ಕಾರ

Last Updated 16 ಫೆಬ್ರುವರಿ 2023, 5:22 IST
ಅಕ್ಷರ ಗಾತ್ರ

ಗಂಗಾವತಿ: 2021–22ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ತಾಲ್ಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿ ಆಯ್ಕೆ ಆಗಿದೆ.

ಗ್ರಾಮ ಪಂಚಾಯ್ತಿಗಳು ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂಬ ಉದ್ದೇಶದಿಂದ 2013-14ರಿಂದ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಯನ್ನು ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ, ಪ್ರಶಸ್ತಿ ಜೊತೆಗೆ ₹ 5 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಮೊದಲ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಐದು ಪಂಚಾಯಿತಿಗಳನ್ನು ಪ್ರತಿ ತಾಲ್ಲೂಕಿನಿಂದ ಆಯ್ಕೆ ಮಾಡಿ ಜಿಲ್ಲಾ ಪಂಚಾಯಿತಿ ಸಿಇಒಗೆ ಕಳಿಸಲಾಗುತ್ತದೆ. ಸಿಇಒ ನೇತೃತ್ವದ ಆಯ್ಕೆ ಸಮಿತಿ ಪಂಚಾಯಿತಿಗಳನ್ನು ಶಿಫಾರಸು ಮಾಡಲಾಗುತ್ತದೆ.

ನಂತರ ತಾಲ್ಲೂಕಿಗೆ ಒಂದು ಪಂಚಾಯ್ತಿಯಂತೆ 233 ಪಂಚಾಯ್ತಿಗಳನ್ನು ರಾಜ್ಯಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ನಿರ್ಧರಿಸಿ ಅಂತಿಮ ಆಯ್ಕೆ ನಡೆಯುತ್ತದೆ. ಗಾಂಧಿ ಗ್ರಾಮ ಪುರಸ್ಕಾರ ಆಯ್ಕೆ ಮಾನದಂಡಗಳ ಪ್ರಕಾರ ನಡೆಯುತ್ತದೆ.

ಇನ್ನೂ ಆನೆಗೊಂದಿ ಗ್ರಾ.ಪಂ.ನಲ್ಲಿ ಉತ್ತಮ ಆಡಳಿತ, ಕಾಮಗಾರಿ, ಕಡತ, ನರೇಗಾ ಕೆಲಸ, ಸ್ವಚ್ಛತೆ, ಶಾಲೆಗಳಿಗೆ ಕೊಠಡಿ, ಮೈದಾನ, ಸಭೆ ಎಲ್ಲವನ್ನು ಅಚ್ಚುಕಟ್ಟಾಗಿ ನಡೆಸಿ, ಅಭಿವೃದ್ಧಿ ಕಾರ್ಯಗಳು ಮಾಡಿರುವ ಕಾರಣದಿಂದಲೇ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ ಎಂದು ಪಿಡಿೊ ಕೃಷ್ಣಪ್ಪ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT