ಗಂಗಾವತಿ: ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಆಕಳು ಸಾಗಾಟದ ವಾಹನ ತಡೆದು ವಿಚಾರಣೆ ಮಾಡಿದ ಕಾರಣಕ್ಕೆ ಹಿಂದುತ್ವ ಕಾರ್ಯಕರ್ತರು ಮತ್ತು ಮುಸ್ಲಿಂ ಸಮುದಾಯದವರ ನಡುವೆ ವಾಗ್ವಾದ ನಡೆದ ಘಟನೆ ಸೋಮವಾರ ಜರುಗಿದೆ.

ಗಂಗಾವತಿ ತಾಲ್ಲೂಕಿನ ಢಣಾಪುರ ಗ್ರಾಮದಿಂದ ಜಂಗಮರ ಕಲ್ಗುಡಿ ಗ್ರಾಮಕ್ಕೆ ವಾಹನವೊಂದರಲ್ಲಿ ಎರಡು ಆಕಳನ್ನು ಸಾಗಿಸಲಾಗುತ್ತಿತ್ತು. ಇದನ್ನು ಕಂಡ ಹಿಂದುತ್ವ ಕಾರ್ಯಕರ್ತರು ವಾಹನ ತಡೆದು, ಮಾಹಿತಿ ಜೊತೆಗೆ ಸಾಗಾಟದ ರಶೀದಿ ಕೇಳಿದರು. ರಶೀದಿ ತೋರಿಸಲು ನಿರಾಕರಿಸಿದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಎಎಸ್ಐ ವೆಂಕಟೇಶ ಚವ್ಹಾಣ್ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಹಿಂದುತ್ವ ಕಾರ್ಯಕರ್ತರು ಮತ್ತು ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಆಗ ಕೊಪ್ಪಳ ಸೈಬರ್ ಕ್ರೈಂ ಡಿವೈಎಸ್ಪಿ ಸಿದ್ದಲಿಂಗಪ್ಪ ಪೊಲೀಸ್ ಪಾಟೀಲ, ಗಂಗಾವತಿ ನಗರಠಾಣೆ ಪಿಐ ಪ್ರಕಾಶ ಮಾಳೆ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ವಾಹನವನ್ನು ಠಾಣೆಗೆ ತಂದು, ಆಕಳು ಸಾಗಾಟದ ಪರವಾನಗಿ, ರಶೀದಿ ಪರಿಶೀಲಿಸಿ ಕಳುಹಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-35-1562612183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.