ಗಂಗಾವತಿ: ತಾಲ್ಲೂಕಿನ ಬಂಡ್ರಾಳ, ಗಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಂದೆ ಪಾಲಕರು, ಶಿಕ್ಷಕರು, ಮಕ್ಕಳು, ಎಐಡಿಎಸ್ಒ ಸಂಘಟನೆ ಸದಸ್ಯರು ‘ನಮ್ಮೂರ ಶಾಲೆ, ನಮ್ಮಯ ಕಣ್ಮಣಿ’ ಎಂಬ ಬ್ಯಾನರ್ ಹಿಡಿದು, ಸರ್ಕಾರಿ ಶಾಲೆ ಮುಚ್ಚದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೌದಿ ಮಾತನಾಡಿ, ‘ಬಂಡ್ರಾಳ, ಗಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಉಳಿವಿಗೆ, ಕೆಪಿಎಸ್ ಯೋಜನೆ ರದ್ದತಿಗೆ ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು, ಮಕ್ಕಳು ಗ್ರಾಮೀಣಮಟ್ಟದಿಂದ ರಾಜ್ಯಮಟ್ಟದವರೆಗೆ ಪ್ರತಿಭಟನೆ ಜೊತೆಗೆ ಸಮಾವೇಶಗಳು ನಡೆಸಿದ್ದೇವೆ. ಈ ಪ್ರತಿಭಟನೆಗೆ ನಾಡಿನ ಹೆಸರಾಂತ ಸಾಹಿತಿಗಳು, ಶಿಕ್ಷಣ ತಜ್ಞರು ಧ್ವನಿಗೂಡಿಸಿದ್ದಾರೆ. ಇಷ್ಟೆಲ್ಲ ಹೋರಾಟ, ಪ್ರತಿಭಟನೆ ನಡೆದರೂ, ರಾಜ್ಯ ಸರ್ಕಾರ ನಾಡಿನ ಪೋಷಕರ, ಶಿಕ್ಷಣ ತಜ್ಞರ, ಸಾಹಿತಿಗಳ ಮಾತು ಕೇಳದೆ ಹಠಮಾರಿತನ ಧೋರಣೆ ತಾಳುತ್ತಿದೆ. ಬಡವರ, ರೈತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾದರೂ ಪರವಾಗಿಲ್ಲ, ಕೆಪಿಎಸ್ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯ’ ಎಂದರು.

ಎಐಡಿವೈಒ ಮುಖಂಡ ಶರಣು ಪಾಟೀಲ ಮಾತನಾಡಿ, ‘ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಜೂನ್ ಆರಂಭದಿಂದಲೇ ಹೊಸ ಕೆಪಿಎಸ್ ಶಾಲೆಗಳು ಆರಂಭಿಸಲಾಗುತ್ತಿದೆ. ರಾಜ್ಯ ಸರ್ಕಾರ 3 ವರ್ಷಗಳಲ್ಲಿ ದೇಶದಲ್ಲೇ ಅತ್ಯುತ್ತಮ ಸರ್ಕಾರಿ ಶಾಲೆ ವ್ಯವಸ್ಥೆ ರೂಪಿಸಲಾಗುವುದು ಎಂದು ನೆಪ ಹೇಳುತ್ತಾ, ಎಂಟು ಶಿಕ್ಷಣದ ಗ್ಯಾರಂಟಿ ಘೋಷಿಸಿ ರಾಜ್ಯದ ಜನತೆಗೆ ವಿಶ್ವಾಸದ್ರೋಹ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಪದಾಧಿಕಾರಿಗಳಾದ ಲಕ್ಶ್ಮಣ ಯಾದವ್, ದೇವರಾಜ ಬಂಡ್ರಾಳ, ಬೆಟ್ಟಪ್ಪ ಜಲ್ಲಿ, ಮಲ್ಲೇಶ ಪೊಲೀಸ್ ಪಾಟೀಲ್, ಕನಕಬಿಂಗಿ, ದುರುಗೇಶ ಜಲ್ಲಿ, ಭಾಷಾಸಾಬ ಆನೆಗುಂದಿ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-35-723565988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.