ಗಂಗಾವತಿ: ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ಬಳಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ, ಕೊಪ್ಪಳ ತಾಲ್ಲೂಕಿನ ಕೂಕನಪಳ್ಳಿಯ ನಾಲ್ವರು ರೈಸ್ಮಿಲ್, ಟ್ರೇಡರ್ಸ್ ಹಾಗೂ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಯಚೂರಿನಿಂದ ಕೊಪ್ಪಳದ ಕಡೆ ಲಾರಿಯಲ್ಲಿ ಆಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದಾಗ, ಕನ್ನಡಪರ ಸಂಘಟನೆಯವರು ಪತ್ತೆ ಹಚ್ಚಿ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಇದರನ್ವಯ ದಾಳಿ ನಡೆಸಿ ಲಾರಿ ಚಾಲಕ ಮಲ್ಲಿಕಾರ್ಜುನ ಅವರನ್ನು ವಿಚಾರಿಸಿದಾಗ ಮಾನ್ವಿಯ ವೀರಭದ್ರೇಶ್ವರ ಇಂಡಸ್ಟ್ರೀಸ್ನ ಬಸವನಗೌಡ ಹಾಲ್ದಾಳ, ವೀರಭದ್ರೇಶ್ವರ ಹಾಲ್ದಾಳ, ವೆಂಕಟರೆಡ್ಡಿ ಅವರ ರೈಸ್ಮಿಲ್ನಿಂದ ಕೂಕನಪಳ್ಳಿಯ ಮಹಾಮಯಾ ಟ್ರೇಡರ್ಸ್ನ ಯಮನೂರಪ್ಪ ಅವರಿಗೆ ಅಕ್ಕಿ ಸರಬರಾಜು ಮಾಡಲಾಗುತ್ತಿತ್ತು ಎಂದು ಹೇಳಲಾಗಿತ್ತು.

ಲಾರಿಯಲ್ಲಿನ ಅಕ್ಕಿಯನ್ನು ತೂಕ ಮಾಡಿದಾಗ 358 ಕ್ವಿಂಟಲ್ ಇರುವುದು ಗುರುತಿಸಲಾಗಿದೆ. ಅಕ್ಕಿಯ ಅಂದಾಜು ಬೆಲೆ ₹10.02 ಲಕ್ಷ ಎಂದು ತಿಳಿದು ಬಂದಿದೆ. ಒಟ್ಟು ಐವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-35-1392266668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.