ಕಂಪ್ಲಿ: ಗಂಗಾವತಿ- ಕಂಪ್ಲಿ-ದರೋಜಿ ರೈಲ್ವೆ ಮಾರ್ಗಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಇಲ್ಲಿನ ಬಿಜೆಪಿ ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ತಳವಾರ ಒತ್ತಾಯಿಸಿದರು.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಈ ಕುರಿತು ಭಾನುವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿ, ಪ್ರಸ್ತುತ ರೈಲ್ವೆ ಮಾರ್ಗದ 31.30 ಕಿ.ಮೀ ಸಮೀಕ್ಷೆ ಈಗಾಗಲೇ ಮುಕ್ತಾಯಗೊಂಡಿರುವುದರಿಂದ ಮುಂದಿನ ಕಾಮಗಾರಿ ಕೈಗೊಳ್ಳಲು ಅನುದಾನದ ಅಗತ್ಯವಿದೆ ಎಂದು ಸಚಿವರಿಗೆ ಮನವರಿಕೆ ಮಾಡಿರುವುದಾಗಿ ಹೇಳಿದರು.

ಸದ್ಯ ಗಂಗಾವತಿಯಿಂದ ಬಳ್ಳಾರಿ 60 ಕಿ.ಮೀ ಅಂತರದಲ್ಲಿದೆ. ಆದರೆ, ರೈಲ್ವೆ ಮೂಲಕ ಬಳ್ಳಾರಿಗೆ ಸಂಚರಿಸಬೇಕಾದರೆ 119 ಕಿ.ಮೀ ಕ್ರಮಿಸಬೇಕಾಗುತ್ತದೆ. ಅದರಿಂದ ಪ್ರಯಾಣಿಕರಿಗೆ ಸಮಯ, ಇಂಧನ, ಸರಕು ಸಾಗಣೆ ದರವೂ ಹೆಚ್ಚಳವಾಗುತ್ತದೆ.

ಗಂಗಾವತಿ-ಕಂಪ್ಲಿ-ದರೋಜಿ ರೈಲು ಮಾರ್ಗ ನಿರ್ಮಿಸಿದಲ್ಲಿ ಬಳ್ಳಾರಿ, ಬೆಂಗಳೂರು, ಗುಂತಕಲ್, ಗುಂಟೂರು ನಗರಗಳಿಗೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಜೊತೆಗೆ ಶ್ರೀಶೈಲ, ತಿರುಪತಿ ಧಾರ್ಮಿಕ ಕ್ಷೇತ್ರಗಳಿಗೆ ಗುಂತಕಲ್ ಮೂಲಕ ತಲುಪಲು ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವಿ ನೀಡಿರುವುದಾಗಿ ವಿವರಿಸಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಹಾಲಿ ರೈಲು ಮಾರ್ಗದ ನಿರ್ಮಾಣಕ್ಕೆ ತ್ವರಿತವಾಗಿ ಅನುದಾನ ಮಂಜೂರು ಮಾಡಲು ಗಮನಹರಿಸುವಂತೆ ಸಚಿವರನ್ನು ಒತ್ತಾಯಿಸಿರುವುದಾಗಿ ತಿಳಿಸಿದರು. ಬಿಜೆಪಿ ಮುಖಂಡರಾದ ವಿಜಯಶಂಕರರೆಡ್ಡಿ, ಸಿದ್ಧಾರ್ಥಗೌಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-25-615681728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.