ಗಂಗಾವತಿ: ಇಲ್ಲಿನ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಗುರುವಾರ ಎಐಎಡಬ್ಲ್ಯುಯು ಕೊಪ್ಪಳ ಜಿಲ್ಲಾ ಸಮಿತಿಯಿಂದ ಉದ್ಯೋಗ ಭರವಸೆ, ನಿವೇಶನ ರಹಿತರಿಗೆ ಮನೆ, ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟಾಖಾತೆ ಒದಗಿಸುವ ಬಗ್ಗೆ 3ನೇ ಕೊಪ್ಪಳ ಜಿಲ್ಲಾ ಸಮ್ಮೇಳನ ಜರುಗಿತು.

ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಾಗರಾಜ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಡಜನರ ಬದುಕಿಗೆ ಬೆಲೆ ಇಲ್ಲದಂತಾಗಿದೆ. ಇರಾನ್ನಲ್ಲಿ ಯುದ್ದ ನಡೆದರೆ, ಭಾರತದಲ್ಲಿ ಬಡವರಿಗೆ ಸಿಲಿಂಡರ್ ಸಿಗುತ್ತಿಲ್ಲ. ಆದರೆ ದಲ್ಲಾಳಿಗಳ ಬಳಿ ಮಾತ್ರ 3 ತಿಂಗಳಿಗೆ ಆಗುವಷ್ಟು ಸಿಲಿಂಡರ್ ಸಂಗ್ರಹವಿರುತ್ತವೆ. ಇವೆಲ್ಲವು ಉಳ್ಳವರಿಗೆ ದೊರೆಯುವ ಸೌಲಭ್ಯಗಳಾಗಿವೆ’ ಎಂದು ಹೇಳಿದರು.

‘ದೇಶದಲ್ಲಿ ಉದ್ಯೋಗ ಅಭದ್ರತೆಯಿದೆ. ಬೇರೆ ದೇಶದಲ್ಲಿ ಯುದ್ಧ ನಡೆದರೆ, ಭಾರತದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗುತ್ತದೆ. ಕಾರ್ಮಿಕರಿಗೆ ಕನಿಷ್ಠ ವೇತನ ದೊರೆಯುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸಿ, ಯೋಜನೆಯ ಸೌಲಭ್ಯ ದೊರೆಯದಂತಾಗಿದೆ. ಔಷಧಗಳು ಮೊದಲು ಕಡಿಮೆ ದರದಲ್ಲಿ ಸಿಗುತ್ತಿತ್ತು. ಮೋದಿ ಪ್ರಧಾನಿ ಆದ ನಂತರ ಔಷಧ ಮಾರಾಟ ಉದ್ದಿಮೆದಾರರ ಪಾಲಾಗಿದೆ’ ಎಂದರು.

ಪ್ರಸಕ್ತ ವರ್ಷ ಮೋದಿ ಸರ್ಕಾರ ₹54 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು, ಕರ್ನಾಟಕ್ಕೆ ರಾಜ್ಯಕ್ಕೆ ₹20 ಲಕ್ಷ ಕೋಟಿ ನೀಡಬೇಕಾಗಿದೆ. ಅನ್ಯ ದೇಶಗಳ ಮೇಲೆ ಬಾಂಬ್ ದಾಳಿ ನಡೆಸಿದರೆ, ಅಲ್ಲಿನ ನಾಯಕರು ಪ್ರತೀಕಾರದ ಸೇಡು ತೀರಿಸಿಕೊಳ್ಳುತ್ತಾರೆ. ಮೋದಿ ಮಾತ್ರ ಅನ್ಯದೇಶದ ನಾಯಕರಿಗೆ ಕೈಕುಲುಕುತ್ತಾರೆ. ಅಮೆರಿಕದ ಟ್ರಂಪ್ ಭಾರತದ ಮೇಲೆ ತೆರಿಗೆ ಹಾಕ್ತಿನಿ ಅಂದ್ರೆ ಮೋದಿ ದೋಸ್ತಿ ಅಂತಾರೆ. ರಾಷ್ಟ್ರದಲ್ಲಿ ಕೂಲಿಕಾರರ ಸಮಸ್ಯೆಗಳು ಸಾಕಷ್ಟಿವೆ’ ಎಂದು ಹೇಳಿದರು.

ನಂತರ ಸಮ್ಮೇಳನದಲ್ಲಿ ವಿ.ಬಿ.ಜಿರಾಮ್ಜಿ ಯೋಜನೆ ರದ್ದತಿ, ನರೇಗಾ ಪುನರ್ ಸ್ಥಾಪನೆ ಮಾಡಿ 200 ದಿನ ಕೆಲಸ ₹700 ಕೂಲಿ, ಕಾಯಕ ಬಂಧುಗಳಿಗೆ ಪ್ರೋತ್ಸಾಹ ಧನ ವಿತರಣೆ, ಬಿಪಿಎಲ್ ಕಾರ್ಡ್ದಾರರಿಗೆ 35 ಕೆಜಿ ಅಕ್ಕಿ, 14 ಅಗತ್ಯ ವಸ್ತು ರಿಯಾಯಿತಿ ದರದಲ್ಲಿ ವಿತರಣೆ, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ, ನಿವೇಶನ ರಹಿತರಿಗೆ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಕನಕಗಿರಿ ತಾಲ್ಲೂಕನ್ನು ಕೃಷ್ಣ ಬಿ ಸ್ಕಿಮ್ ಅಡಿಯಲ್ಲಿ ಸಮಗ್ರ ನೀರಾವರಿ ಮಾಡಲು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಡಾ.ಸ್ವಾಮಿನಾಥನ್ ವರದಿ ಜಾರಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ದುಡಿಯುವ ಜನರ ಹಕ್ಕುಗಳ ರಕ್ಷಣೆ ಮಾಡುವ ಕುರಿತು ನಿರ್ಣಯಗಳನ್ನು ಕೈಗೊಂಡರು. ಸಿಐಟಿಯು ಸಂಯೋಜಿತ ಕರ್ನಾಟಕ ಗ್ರಾ.ಪಂ ರಾಜ್ಯಾಧ್ಯಕ್ಷ ಮಂಟನಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್, ದೇವದಾಸಿ ವಿಮೋಚನೆ ಸಂಘದ ರಾಜ್ಯಾಧ್ಯಕ್ಷೆ ಹುಲಿಗೆಮ್ಮ, ಭಾಗಮ್ಮ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ರಾಜ್ಯಾಧ್ಯಕ್ಷ ಲಕ್ಷ್ಮೀದೇವಿ ಸೋನಾರೆ, ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಹಿರಿಯ ಮುಖಂಡ ಗಂಗಾಧರಯ್ಯಸ್ವಾಮಿ, ರೈತ ಸಂಘದ ಜಿಲ್ಲಾಧ್ಯ ಕ್ಷ ಶ್ರೀನಿವಾಸ ಹೊಸಳ್ಳಿ, ಶಿವಣ್ಣ ಬೆಣಕಲ್, ಎಸ್.ಎಫ್.ಐ. ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಮುಖಂಡರ ಹುಸೇನಪ್ಪ ಕೆ, ಬಾಳಪ್ಪ ಹುಲಿಹೈದರ, ರಮೇಶ ಹೀರೆಡಂಕ ನಕಲ್, ಅಡಿವೆಪ್ಪ ಕುಷ್ಟಗಿ, ಶಿವಪ್ಪ ಸಿಂಗನಾಳ, ಸಿಐಟಿಯು ಮುಖಂಡ ಮಂಜುನಾಥ ಡಗ್ಗಿ ಸೇರಿ ಕಾರ್ಮಿಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-35-59790660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.