ಗಂಗಾವತಿ: ‘ಕಾರ್ಮಿಕ ವಿರೋಧಿ ಸಂಹಿತೆ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದು ಸೇರಿ ಕಾರ್ಮಿಕರಿಗೆ ಕನಿಷ್ಠ ವೇತನ ₹43 ಸಾವಿರ ಹೆಚ್ಚಳಕ್ಕೆ ಒತ್ತಾಯಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಗಂಗಾವತಿ ಸಮಿತಿ ಸದಸ್ಯರು, ನಗರದ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ದೊರೆರಾಜು ಮಾತನಾಡಿ, ‘ಕಾರ್ಮಿಕರ ಕನಿಷ್ಠ ವೇತನವನ್ನು 2017ರಲ್ಲಿ ಪರಿಷ್ಕರಿಸಿದ್ದು ಬಿಟ್ಟರೆ 2025ರವರೆಗೆ ಪರಿಷ್ಕರಣೆ ಮಾಡಿಲ್ಲ. ಇದರಿಂದ ಕಾರ್ಮಿಕರಿಗೆ ಶಾಸನ ಬದ್ಧ ವೇತನ ನಿರಾಕರಣೆ ಮಾಡಿದಂತಾಗಿದೆ. ಕಡಿಮೆ ವೇತನ ಶೋಷಣೆಯ ಕೆಲಸದ ಪರಿಸ್ಥಿತಿ ಮತ್ತು ನಿರಂತರ ಲಿಂಗ ಆಧಾರಿತ ವೇತನ ಅಸಮಾನತೆಗಳಿಂದ ನಿರೂಪಿಸಲ್ಪಟ್ಟಿವೆ. ಇದು ರಾಜ್ಯದಲ್ಲಿ ಅತ್ಯಂತ ಕಡಿಮೆ ಅಧಿಸೂಚಿತ ಕನಿಷ್ಠ ವೇತನ ಹೊಂದಿದ ವಲಯಗಳಾಗಿವೆ. ರಾಜ್ಯ ನಿಗದಿಪಡಿಸಿದ ಕನಿಷ್ಠ ವೇತನ ದರಗಳಿಗಿಂತ ಕಡಿಮೆ ವೇತನ ನೀಡುತ್ತಿರುವುದು ಕಾರ್ಮಿಕರ ಬಲವಂತದ ದುಡಿಮೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿಟಿಯು ಉಪಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ ಮಾತನಾಡಿ, ‘ಕೇಂದ್ರ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದ ನಡುವೆ 4 ಸಂಹಿತೆಗಳನ್ನು ಜಾರಿಗೊಳಿಸಿದೆ. ಕೂಡಲೇ ಅವುಗಳನ್ನು ಹಿಂಪಡೆಯಬೇಕು. ನಿಗದಿತ ಉದ್ಯೋಗಗಳಿಗೆ ಅಧಿಸೂಚನೆಗಳ ಜಾರಿಗೆ ಬರುವ ದಿನಾಂಕ ಇಂದಿನ ಅಧಿಸೂಚನೆ ಅವಧಿ ಮುಗಿದ 5 ವರ್ಷಗಳಿಂದ ಆರಂಭವಾಗಬೇಕು’ ಎಂದು ಹೇಳಿದರು.

‘ವೇತನ ಪರಿಷ್ಕರಣೆ ಪ್ರತಿ 3 ವರ್ಷಗಳಿಗೊಮ್ಮೆ ನಡೆಯಬೇಕು. ಕನಿಷ್ಠ ವೇತನ ಸಲಹಾ ಮಂಡಳಿ 2015ರ ಸಭೆಯಲ್ಲಿನ ಶಿಫಾರಸುಗಳನ್ನು ಅಂಗೀಕರಿಸಬೇಕು. ಕಾರ್ಮಿಕರ ಹಕ್ಕು ರಚಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವೇತನ ಸಂಹಿತೆ 2019 ತಿದ್ದುಪಡಿ ಮಾಡಬೇಕು. ನೇರಪಾವತಿ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು’ ಎಂದು ಹೇಳಿದರು.

‘ಕಾಯಂ ಪೌರಕಾರ್ಮಿಕರಿಗೆ ಇರುವಂತೆ ಗೃಹಭಾಗ್ಯ ಯೋಜನೆಯನ್ನು ಎಲ್ಲ ಪೌರಕಾರ್ಮಿಕರಿಗೂ ವಿಸ್ತರಿಸಬೇಕು. ತ್ಯಾಜ್ಯ ಸಾಗಿಸುವ ವಾಹನ ಚಾಲಕರಿಗೆ ನೇರಪಾವತಿಗೆ ಒಳಪಡಿಸಿ ಹಂತ-ಹಂತವಾಗಿ ಕಾಯಂಗೊಳಿಸಬೇಕು. ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವರ್ಷದ 12 ತಿಂಗಳು ಕಾಯಂ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಪೌರಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಮಾಯಮ್ಮ, ರೇಣುಕಮ್ಮ, ಶೇಖರಪ್ಪ, ದುರುಗಪ್ಪ ಕಾರಟಗಿ, ಪಾರ್ವತಮ್ಮ, ಹುಲಿಗೆಮ್ಮ, ಶಿವಕುಮಾರ, ಮೈಬುಬಸಾಬ, ಸೈಯದ್ ಹುಸೇನ್, ಜಾಫರ್ ಹುಸೇನ್, ಗುಂಡಪ್ಪ ಎಂ., ಹೇಮಣ್ಣ, ವಾಸಪ್ಪ, ಗಿಡ್ಡಪ್ಪ, ಯಲ್ಲಮ್ಮ, ದುರುಗಮ್ಮ, ಕೆಂಚಮ್ಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-35-1376195742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.