ಗಂಗಾವತಿ: ‘ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳ ಪ್ಯಾಕೆಟ್ಗಳು ತಿಪ್ಪೆಗುಂಡಿಗೆ ಬಿಸಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ, ವಿಡಿಯೊ ತುಣುಕುಗಳು ಹರಿದಾಡುತ್ತಿದ್ದು, ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕರವೇ(ಸ್ವಾಭಿಮಾನಿ ಬಣ) ಶುಕ್ರವಾರ ನಗರದ ಸಿಡಿಪಿಒ ಕಚೇರಿಯಲ್ಲಿ ಒತ್ತಾಯ ಮಾಡಿದೆ.

ಸಂಘಟನೆ ತಾಲ್ಲೂಕು ಅಧ್ಯಕ್ಷ ಹನುಮಂತ ಕಂಬಾರ ಮಾತನಾಡಿ, ‘ಈಚೆಗೆ ಗಂಗಾವತಿ ಅಂಬೇಡ್ಕರ್ ನಗರದ ಬೈ ಪಾಸ್ ರಸ್ತೆ, ಲಕ್ಷ್ಮೀಕ್ಯಾಂಪ್ ಪ್ರದೇಶದ ತಿಪ್ಪೆಗುಂಡಿಗಳಲ್ಲಿ ಬೆಲ್ಲ, ಮಿಲ್ಲೆಟ್, ಲಡ್ಡು ಸೇರಿ ಪೌಷ್ಟಿಕ ಆಹಾರ ಪದಾರ್ಥಗಳ ಪ್ಯಾಕೆಟ್ ಬಿಸಾಡಿದ ಬಗ್ಗೆ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾ ಡಿವೆ. ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಕೋಟ್ಯಂತರ ಹಣವ್ಯಯಿಸಿ, ಪೌಷ್ಟಿಕ ಆಹಾರ ನೀಡುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರದ ಕೆಲಸದಿಂದ ಈ ಯೋಜನೆ ದುರ್ಬಳಕೆ ಆಗುತ್ತಿದೆ. ಯೋಜನೆ ದುರ್ಬಳಕೆಗೆ ಕಾರಣವಾದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಿಭಾಗೀಯ ಅಧ್ಯಕ್ಷ ಆಂಜನೇಯ ಈಡಿಗೇರ ಮಾತನಾಡಿ, ‘ಪೌಷ್ಟಿಕ ಆಹಾರದ ಪದಾರ್ಥಗಳ ಪಾಕೆಟ್ ಬಿಸಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆಯ ಮೂಲಕ ತಪ್ಪಿತಸ್ಥರನ್ನು ಗುರುತಿಸಿ ಅವರನ್ನ ಕೆಲಸದಿಂದ ಅಮಾನತು ಗೊಳಿಸಬೇಕು ಎಂದು ಆಗ್ರಹಿಸಿ, ಸಿಡಿಪಿಒ ಜಯಶ್ರೀ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಂಘಟನೆ ಸದಸ್ಯರಾದ ಸಿಕಂದರ್, ಹುಲಿಗೇಶ, ಪರಶುರಾಮ, ಕೃಷ್ಣ ನಾಯಕ, ದಾವಲ್ ಸಾಬ, ಅಜ್ಜು ಅಹಮದ್, ಬಸವರಾಜ ಕಲ್ಗುಡಿ, ಮಂಜುನಾಥ ಸೇರಿ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-35-364499126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.