ಗಂಗಾವತಿ: ಹಿರಿಯರು–ಕಿರಿಯರಿಗೆ ಮನರಂಜನೆ, ವಿಶ್ರಾಂತಿ, ಸಂಜೆ–ಬೆಳಿಗ್ಗೆ ವಾಯುವಿಹಾರ, ಮಕ್ಕಳ ಆಟ ಸೇರಿದಂತೆ ನೆಮ್ಮದಿಯ ತಾಣಗಳಾಗಬೇಕಿದ್ದ ನಗರದ ಉದ್ಯಾನಗಳ ಒತ್ತುವರಿ, ಮೂಲಸೌಲಭ್ಯಗಳ ಕೊರತೆ, ನಿರ್ವಹಣೆಯಿಲ್ಲದೆ ಸೊರಗಿವೆ. ಜತೆಗೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಉದ್ಯಾನಗಳ ಚೆಂದವಿಲ್ಲದೆ ಮಂಕಾಗಿವೆ.

ಭತ್ತದನಾಡು ಗಂಗಾವತಿ ತಾಲ್ಲೂಕು ಶರವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ನಗರಭಾಗ ಅಧಿಕೃತ, ಅನಧಿಕೃತ ಲೇಔಟ್, ಶಿಕ್ಷಣ ಸಂಸ್ಥೆ, ವ್ಯಾಪಾರ, ಹೊಟೇಲ್ ಸೇರಿ ವಿವಿಧ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ.

ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು 1.50 ಲಕ್ಷ ಜನಸಂಖ್ಯೆಯಿದ್ದು, ವಿವಿಧ ಕೆಲಸಗಳ ನಿಮಿತ್ತ ನಿತ್ಯ ಗಂಗಾವತಿ ನಗರಕ್ಕೆ ಸಾವಿರರು ಸಂಖ್ಯೆಯ ಜನರು ಬರುತ್ತಾರೆ. ಬಿಸಿಲಿನ ತಾಪ ತಾಳದೆ ವಿಶ್ರಾಂತಿಗಾಗಿ ಸಾರ್ವಜನಿಕರು ಬಸ್ ನಿಲ್ದಾಣದ ಬಳಿಯ ನೆಹರೂ ಉದ್ಯಾನಕ್ಕೆ ತೆರಳುತ್ತಾರೆ. ಆದರೆ ಉದ್ಯಾನದಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಜನರು ಪರದಾಡುವಂತಾಗಿದೆ.

ಗಂಗಾವತಿ ನಗರಸಭೆ ವ್ಯಾಪ್ತಿಗೆ ಎನ್.ಎ. ಸೈಟ್ ಆಧಾರದಡಿ 56 ಸಾರ್ವಜನಿಕ ಉದ್ಯಾನಗಳಿದ್ದು, ಕಡತಕ್ಕೆ ಮಾತ್ರ ಸೀಮಿತಗೊಂಡಿವೆ. ಆದರೆ ಅನಧಿಕೃತ ಲೇಔಟ್ಗಳಲ್ಲಿ ಉದ್ಯಾನಗಳಿಗೆ ಜಾಗ ಮೀಸಲಿಡಲಾಗಿತ್ತು. ಕೆಲವರು ಉದ್ಯಾನದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹಲವಡೆ ಉದ್ಯಾನಗಳೇ ನಿರ್ಮಾಣವಾಗಿಲ್ಲ. ನಗರದ ಕೆಲವಡೆ ತಕ್ಕಮಟ್ಟಿಗೆ ಉದ್ಯಾನಗಳ ಸ್ಥಿತಿ ನೋಡಲು ಚೆಂದವಿದ್ದರೂ, ನಿರ್ವಹಣೆ ಇಲ್ಲದ್ದರಿಂದ ಅಧ್ವಾನದತ್ತ ಸಾಗಿವೆ.

ಅಮೃತಸಿಟಿ ಯೋಜನೆಯಡಿ ನಗರದಲ್ಲಿ ಸಾಕಷ್ಟು ಉದ್ಯಾನಗಳ ನಿರ್ಮಾಣವಾಗಿದ್ದು, ಯಾವೊಂದೂ ಉದ್ಯಾನ ಸುಸಜ್ಜಿತವಾಗಿಲ್ಲ. 2015-16 ಸಾಲಿನಲ್ಲಿ ಅಮೃತಸಿಟಿ ಯೋಜನೆಯಡಿ ₹2.35 ಕೋಟಿ ಅನುದಾನ ಬಳಸಿ, ಜಯ ನಗರ, ಕುವೆಂಪು ಬಡಾವಣೆ, ಹೊಸಳ್ಳಿ ರಸ್ತೆ, ಮಹಾಬಳೇಶ್ವರ, ಆಂಜನೇಯ, ಶಿಕ್ಷಕರ ಕಾಲೊನಿ, ಗದ್ವಾಲ್ ಕ್ಯಾಂಪ್, ಇಂದಿರಾನಗರ ಮಕ್ಕಳ ಉದ್ಯಾನಕ್ಕೆ ಮಕ್ಕಳ ಅಟಿಕೆ, ಜಿಮ್ ಪರಿಕರ ಅಳವಡಿಸಲಾಗಿತ್ತು. ನಿವರ್ಹಣೆಯಿಲ್ಲದೆ ಇವೆಲ್ಲ ಹಾಳಾಗಿವೆ.

ಶೌಚಾಲಯ, ಕುಡಿಯುವ ನೀರಿಲ್ಲ: ನಗರದಲ್ಲಿನ ಉದ್ಯಾನಗಳ ನಿರ್ವಹಣೆ ಸಮಸ್ಯೆ ಒಂದು ಕಡೆಯಾದರೆ, ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಮನೆಬಿಟ್ಟು ಉದ್ಯಾನವನಕ್ಕೆ ಬರುವ ಹಿರಿಯರು, ಮಹಿಳೆಯರು, ಮಕ್ಕಳು ಕುಡಿಯುವ ನೀರು, ಶೌಚಾಲಯಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಕದಾಸ ಬಡಾವಣೆ ಬಳಿಯ ಉದ್ಯಾನದಲ್ಲಿ ತಾತ್ಕಾಲಿಕ ಶೌಚಾಲಯವಿದ್ದರೂ ನಿರ್ವಹಣೆಯಿಲ್ಲ. ವಿದ್ಯುತ್ ಸರಬರಾಜು ಮಂಡಳಿಯ ದುರಸ್ತಿಗೆ ಕಾದಿದೆ.

ಚರಂಡಿ ನೀರು: ಉದ್ಯಾನವನಗಳ ಪಕ್ಕವೇ ಚರಂಡಿಗಳು ಹಾದು ಹೋಗಿದ್ದು, ಮಳೆ ಬಂದರೆ ಚರಂಡಿಗಳು ತುಂಬಿ, ಸರ್ಕಾರಿ ಆಸ್ಪತ್ರೆ ಬಳಿಯ ಮಕ್ಕಳ ಉದ್ಯಾನಕ್ಕೆ ಚರಂಡಿ ನೀರು ನುಗ್ಗುತ್ತದೆ. ಬಸ್ ನಿಲ್ದಾಣದ ಬಳಿಯ ನೆಹರೂ ಉದ್ಯಾನ, ಮಹಾಬಲೇಶ್ವರ ಬಡಾವಣೆ ಪಾರ್ಕ್ನ ಬಳಿಯ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ಗಬ್ಬುನಾರುತ್ತವೆ. ಮಳೆ ಬಂದರೆ ಕೆಲವು ನೀರಿನಿಂದ ಆವೃತವಾಗಿ ನಾಲ್ಕೈದು ದಿನಗಳವರೆಗೆ ಬಳಸಲಾಗದಂತಹ ಸ್ಥಿತಿಗೆ ತಲುಪುತ್ತವೆ.

ಸಿಗರೇಟ್, ಗುಟ್ಕಾ, ಮದ್ಯಸೇವನೆ: ನಗರದ ಒಳಭಾಗದಲ್ಲಿರುವ ಬಹುತೇಕ ಉದ್ಯಾನಗಳು ಪುಂಡರ ಪಾಲಿಗೆ ಧೂಮಪಾನ, ಮದ್ಯಪಾನ, ಗುಟ್ಕಾ ಸೇವಿಸುವ ತಾಣಗಳಾಗಿವೆ. ಉದ್ಯಾನದಲ್ಲಿ ಮದ್ಯದ ಬಾಟಲಿ, ಸುಟ್ಟಿರುವ ಸಿಗರೇಟ್ ತುಂಡುಗಳು, ಗುಟ್ಕಾ ಚೀಟಿಗಳು ಕಾಣುತ್ತವೆ. ಪುಂಡರ ದಾಂಧಲೆಗೆ ಮಕ್ಕಳ ಆಡುವ ಪರಿಕರಗಳು ಮುರಿದಿವೆ. ಈವರೆಗೂ ದುರಸ್ತಿಯಾಗಿಲ್ಲ.

ನೈರ್ಮಲ್ಯದ ಕೊರತೆ: ಕುವೆಂಪು ಬಡಾವಣೆ, ಎಪಿಎಂಸಿ, ಸೆಂಟ್ ಫಾಲ್ಸ್ ಕಾಲೇಜು, ನೆಹರೂ, ಟೀಚರ್ಸ್ ಕಾಲೊನಿ, ಮಹಾಬಲೇಶ್ವರ ಉದ್ಯಾನಗಳಲ್ಲಿನ ಪೇವರ್ಸಗಳ ಮೇಲೆ ಹುಲ್ಲು ಬೆಳೆದಿದೆ. ಕೆಲವಡೆ ಗೋಡೆಗಳು ಮುರಿದಿವೆ, ಮಕ್ಕಳ ಆಟದ ಸ್ಥಳಗಳಲ್ಲಿ ತೆಗ್ಗುಗಳು ಬಿದ್ದು, ಮಳೆ ನೀರು ನಿಲ್ಲುತ್ತದೆ. ಉದ್ಯಾನದ ಬೇಲಿಗೆ ಮುಳ್ಳುಕಂಟಿ, ಬಳ್ಳಿಗಳು ಆವರಿಸಿಕೊಂಡಿವೆ. ಎಪಿಎಂಸಿ ಉದ್ಯಾನದಲ್ಲಿ ಹುಲ್ಲು ಆವರಿಸಿಕೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-35-1681896879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.