ಗಂಗಾವತಿ: ತಾಲ್ಲೂಕಿನ ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಈಚೆಗೆ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಸಹಯೋಗದಲ್ಲಿ ರಾಷ್ಟ್ರೀಯ ಹಾವು ಕಡಿತ ನಿಯಂತ್ರಣ ಜಾಗೃತಿ ಕಾರ್ಯಕ್ರಮ ಜರುಗಿತು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೇವಮ್ಮ ಮಾತನಾಡಿ, ‘ಹಾವು ಕಡಿತದಿಂದಾಗುವ ಮರಣ ತಡೆಯಲು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತ ಹಳ್ಳಿಗಳ ದೇಶ ಶೇ 70ಕ್ಕಿಂತ ಹೆಚ್ಚು ಜನರು ಕೃಷಿ ಅವಲಂಬಿಸಿದ್ದಾರೆ. ದೇಶದಲ್ಲಿ ಪ್ರಮುಖ ನಾಗರಹಾವು, ಕಟ್ಟಾವು, ಕೊಳಕುಮಂಡಲ, ಗರಗಸ ಮಂಡಲದಂತಹ ಹಾವುಗಳು ಹೆಚ್ಚು ವಿಷಕಾರಿಯಾಗಿದ್ದು, ಶೇ 90ರಷ್ಟು ಸಾವು ಸಂಭವಿಸುತ್ತದೆ. ಈ 4 ಹಾವುಗಳು ರಾತ್ರಿ ವೇಳೆಯಲ್ಲಿ ಹೆಚ್ಚು ಸಂಚರಿಸುತ್ತವೆ. ಜನರು ರಾತ್ರಿ ಸಂಚರಿಸುವಾಗ ಟಾರ್ಚ್ ಬಳಸಬೇಕು. ಹಾಗೇ ಹಾವುಗಳು ತಿನ್ನುವ ಹೆಗ್ಗಣಗಳನ್ನು ಮನೆಯತ್ತ ಸುಳಿಯದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಜಮೀನಿನಲ್ಲಿ ರೈತರು ಶೂ ಬಳಸಿ ಕೆಲಸ ಮಾಡಬೇಕು. ಅಲ್ಲೆ ಮಲಗುವ ಅಗತ್ಯವಿದ್ದರೆ ಮಂಚ ಹಾಕಿಕೊಳ್ಳಬೇಕು. ಹಸಿ ಹುಲ್ಲು ಕೊಯ್ಯುವಾಗ ಕುಡುಗೋಲ ಬಳಸಬೇಕು. ಹಾವು ಕಚ್ಚಿದರೆ 40 ನಿಮಿಷದೊಳಗೆ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು’ ಎಂದು ಹೇಳಿದರು.

‘ಹಾವು ಕಡಿದ ವ್ಯಕ್ತಿಗೆ ಗಾಬರಿ ಆಗುವ ವಿಷಯಗಳನ್ನು ತಿಳಿಸದೆ, ಸಮಾಧಾನ ಪಡಿಸಿಬೇಕು. ರಕ್ತಬಂಧಕಪಟ್ಟಿ ಕಟ್ಟ ಬಾರದು. ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಚ್ಚಿದ ಭಾಗ ಅಲುಗಾಡದಂತೆ ನೋಡಿಕೊಳ್ಳಬೇಕು. ಗಾಯವನ್ನು ಕತ್ತರಿಸಬಾರದು. ಕಚ್ಚಿದ ಜಾಗಕ್ಕೆ ಏನೂ ಹಚ್ಚಬಾರದು. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿಸಿಬೇಕು. ನಾಟಿಔಷಧ ಹಾಗೂ ಅಸುರಕ್ಷಿತ ಚಿಕಿತ್ಸಾ ಪದ್ಧತಿ ಮಾಡಬಾರದು’ ಎಂದು ಮಾಹಿತಿ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ಕುಮಾರ ಸೇರಿ ಶುಶ್ರೂಷಣಾಧಿಕಾರಿ, ಪ್ರಯೋಗಶಾಲಾ ತಂತ್ರಜ್ಞರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಗರ್ಭಿಣಿಯರು, ಬಾಣಂತಿಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-35-825690368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.