ಗಂಗಾವತಿ: ತಾಲ್ಲೂಕಿನ ತಿರುಮಲಾಪುರ ಗ್ರಾಮದ ರಾಮಕೃಷ್ಣರೆಡ್ಡಿ ರೆಸ್ಟೋರೆಂಟ್ ಸಮೀಪದ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ₹15.31 ಲಕ್ಷ ಹಣ, ಒಂದು ಟೊಯೊಟಾ ಕಾರು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ತಿರುಮಲಾಪುರ ಗ್ರಾಮದ ರಾಮಕೃಷ್ಣರೆಡ್ಡಿ ರೆಸ್ಟೋರೆಂಟ್ ಸಮೀಪದ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ನೇತೃತ್ವದಲ್ಲಿನ ತಂಡ ದಾಳಿ ನಡೆಸಿದೆ.
ಈ ವೇಳೆ ಏಳು ಜನ ಆರೋಪಿಗಳನ್ನ ಬಂಧಿಸಿ, ಜಾಮೀನನ ಮೇಲೆ ಹೊರಬಿಡಲಾಗಿದೆ.
ಆರೋಪಿಗಳನ್ನ ರಾಯಚೂರು ಜಿಲ್ಲೆಯ ಅಮರಗುಂಡಪ್ಪ ಶರಣಬಸಪ್ಪ ಗೋಮಾಸಿ, ಅಡಿವೆಪ್ಪ ಅಮರಪ್ಪ ವಾಲ್ಮೀಕಿ, ಭೀಮಪ್ಪ ಈರಪ್ಪ ಹೊಸಳ್ಳಿ, ಗದಗ ಜಿಲ್ಲೆಯ ನಾಗರಾಜ ಈರಪ್ಪ ಕೋಳಿ, ವೀರೇಶ ಸಣ್ಣೆಪ್ಪ ಹಾದಿಮನಿ, ಚಿತ್ರದುರ್ಗ ಜಿಲ್ಲೆಯ ಚಂದ್ರಶೇಖರ ಸಿದ್ದಪ್ಪ, ವಿಜಯನಗರ ಜಿಲ್ಲೆಯ ಕೊಟ್ರೇಶ ಕೊಟ್ರಯ್ಯ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.