ಗಂಗಾವತಿ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಈಚೆಗೆ ಬಿ.ಎಲ್. ಬುಲ್ಸ್ ಕರಾಟೆ ಸಂಸ್ಥೆಯಿಂದ ಬೆಲ್ಟ್ ಪರೀಕ್ಷೆ ಕೈಗೊಳ್ಳಲಾಯಿತು.

ಅಂತರರಾಷ್ಟ್ರೀಯ ಅಂಧರ ಕ್ರಿಕೆಟ್ ಕ್ರೀಡಾಪಟು ಲೋಕೇಶ ಮಾತನಾಡಿ, ‘ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಸಾಧನೆಗೆ ಉತ್ತೇಜನ ನೀಡುವಂತಹ ಕಾರ್ಯಕ್ರಮ ಇದಾಗಿದೆ. ಮನೆಯಲ್ಲಿ ಪಾಲಕರು ಮಕ್ಕಳಲ್ಲಿನ ಆಸಕ್ತಿಗಳನ್ನು ಪ್ರೋತ್ಸಾಹಿಸಬೇಕು. ಕ್ರೀಡೆ, ಕರಾಟೆ, ಜಿಮ್ನಾಸ್ಟಿಕ್ ಸೇರಿ ಹಲವು ವಿಭಾಗಗಳಲ್ಲಿ ಸಾಧನೆಗೈಯುವ ಶಕ್ತಿ ಮಕ್ಕಳಲ್ಲಿದ್ದು, ಪಾಲಕರು ಗುರಿಸಾಧನೆಗೆ ಬೆಂಬಲಿಸಬೇಕು’ ಎಂದು ಹೇಳಿದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿ ಜೋಡಿ ಮಾತನಾಡಿ, ‘ಸದೃಢ ದೇಹದಲ್ಲಿ ಸದೃಢ ಮನಸ್ಸಿನಂತೆ, ಕರಾಟೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಬಹಳ ಉಪಯುಕ್ತವಾಗಿದೆ. ಆತ್ಮರಕ್ಷಣೆಗಾಗಿ ಅಗತ್ಯ ಕ್ರೀಡೆಯಾಗಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಯ ಅವಕಾಶಗಳಿದ್ದು, ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು’ ಎಂದರು.

ಬಿ.ಎಲ್.ಬುಲ್ಸ್ ಸಂಸ್ಥೆ ಉಪಾಧ್ಯಕ್ಷ ಆಂಜನೇಯ ತಳವಾರ ಮಾತನಾಡಿ, ‘ಸಂಸ್ಥೆ ಹಲವು ವರ್ಷಗಳಿಂದ ಗ್ರಾಮೀಣ ಭಾಗದಿಂದ ನಗರಮಟ್ಟದವರೆಗೆ ಮಕ್ಕಳಿಗೆ ಉತ್ತಮ ಕರಾಟೆ ತರಬೇತಿ ನೀಡುತ್ತ, ಸಾಧನೆಗೆ ದಾರಿ ತೋರುತ್ತಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ ಒಟ್ಟು 47 ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಅಗಸ್ತ್ಯ ಮತ್ತು ಹೇಮಾ ಡಬಲ್ ಪ್ರಮೋಷನ್ ಪಡೆದರೆ, ರಿಷಿಕ್ ಬ್ಲಾಕ್ ಬೆಲ್ಟ್ ಪಡೆದುಕೊಂಡ. ತೀರ್ಪುಗಾರರಾಗಿ ಕರಾಟೆ ಶಿಕ್ಷಕ ಅಬ್ದುಲ್ ರಜಾಕ್ ಭಾಗವಹಿಸಿದ್ದರು.

ಬಿ.ಎಲ್.ಬುಲ್ಸ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ ರಾಥೋಡ್, ಮಂಜುನಾಥ ವಕೀಲ, ಮಂಜುನಾಥ, ಕರಾಟೆ ಶಿಕ್ಷಕ ವೀರೇಶ, ಮೀನಾಕ್ಷಿ, ಪ್ರಜ್ವಲ್, ಸಿರಾಜ್, ನಾಗರಾಜ, ಶ್ಯಾಮ್, ಕಿರಣ ಸೇರಿ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-35-262197446

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.