ಗಂಗಾವತಿ: ಬಾಲ್ಯವಿವಾಹ ಮಾಡಿದ ಆರೋಪ ಸಾಬೀತಾಗಿದ್ದ ಪ್ರಕರಣವೊಂದರಲ್ಲಿ ಗಂಗಾವತಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ ಅವರು ಬಾಲಕಿಯ ತಂದೆ, ಯುವಕ ಮತ್ತು ಯುವಕನ ತಾಯಿಗೆ ಶಿಕ್ಷೆ ವಿಧಿಸಿ, ಆದೇಶ ನೀಡಿದ್ದಾರೆ.

ಬಾಲಕಿಯ ತಂದೆ ಮಹೇಶ ಬಸಪ್ಪ ಕುಡತ್ಲಿ, ಯುವಕ ಈರಣ್ಣ ಕೃಷ್ಣಪ್ಪನಾಯಕ, ಯುವಕನ ತಾಯಿ ದುರ್ಗಮ್ಮ ಕೃಷ್ಣಪ್ಪ ಶಿಕ್ಷೆಗೊಳಗಾದವರು.

2021ರ ಮೇ 5ರಂದು ಮಹೇಶ, ದುರ್ಗಮ್ಮ, ತನ್ನ ಮಗ ಈರಣ್ಣನ ಜೊತೆ ಕೃಷ್ಣದೇವರಾಯ ನಗರದ ತಮ್ಮ ನಿವಾಸದಲ್ಲಿ ಬಾಲಕಿಯ ವಿವಾಹ ಮಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿ, ಅಂದಿನ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐಗಳಾದ ಯಲ್ಲಪ್ಪ, ಶಾರವ್ವ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದು, ಬಾಲ್ಯವಿವಾಹ ನಿಷೇಧ ಕಾಯ್ದೆಯ ಪ್ರಕಾರ ಅಪರಾಧಿಗಳಿಗೆ 2 ವರ್ಷ ಜೈಲು, ತಲಾ ₹10 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ದೇವಯ್ಯಸ್ವಾಮಿ ಹಿರೇಮಠ ವಾದ ಮಂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-35-1232741033

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.