ಗಂಗಾವತಿ: ‘ಕಾಂಗ್ರೆಸ್ ಪಕ್ಷಕ್ಕೆ ನಮ್ಮತಂದೆ ಎಚ್.ಜಿ. ರಾಮುಲು ಅವರು ಸಂಸದ, ಸಚಿವರಾಗಿ, ನಾನು ಜಿಲ್ಲಾಧ್ಯಕ್ಷ, ಕಾಡಾ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಿದ್ದೇವೆ. ಜೊತೆಗೆ ಕ್ಷೇತ್ರದ ಶಾಸಕ, ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿಗೆ ಶ್ರಮಿಸಿದ್ದೇವೆ. ಆದರೂ ಪಕ್ಷದ ಧುರೀಣರು ನಮ್ಮ ಕುಟುಂಬವನ್ನು ಕಡೆಗಣಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ್ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾವತಿ ಕ್ಷೇತ್ರದ ಅಭಿವೃದ್ಧಿ, ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದೇನೆ. ನಮ್ಮದೇ ಜಿಲ್ಲೆಯ ಕೆಲ ನಾಯಕರು ವರಿಷ್ಠರನ್ನು ದಾರಿ ತಪ್ಪಿಸುತ್ತಿರುವ ಕಾರಣ ಕೆಲಸಗಳು ಆಗುತ್ತಿಲ್ಲ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಈಚೆಗೆ ನಡೆದ ನಗರಠಾಣೆ ಪಿಐ ವರ್ಗಾವಣೆ, ಗಂಗಾವತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಹ ಕಾಂಗ್ರೆಸ್ ಪಕ್ಷದ ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಗಂಗಾವತಿ ಕ್ಷೇತ್ರದವರಾದ ನಮಗೆ ಮಾಹಿತಿ ನೀಡದೆ ಆಯ್ಕೆ ಮಾಡಿದ್ದಾರೆ. ಗಂಗಾವತಿಗೆ ಬಿಎಲ್ಎ-1 ಆಗಿ ಸಂಸದ ರಾಜಶೇಖರ ಹಿಟ್ನಾಳ ಆಯ್ಕೆಯಾಗಿದ್ದು ಸಂತಸ. ಆದರೆ ಸ್ಥಳೀಯ ನಾಯಕರಿಗೆ ಅವಕಾಶ ನೀಡಬಹುದಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.

‘2023ರಲ್ಲಿ ಅನ್ಸಾರಿ ಚುನಾವಣೆಗೆ ನಿಂತಾಗ ಕೈಜೋಡಿಸುವುದಾಗಿ ಬೆಂಗಳೂರಿನಲ್ಲಿಯೇ ಮಾತುಕೊಟ್ಟಿದ್ದೆ. ಅವರು ಮುಂದೆ ಬರಲಿಲ್ಲ. ನಾನು ವಿಜಯನಗರ ಜಿಲ್ಲೆಯ ಎಚ್.ಆರ್. ಗವಿಯಪ್ಪ ಅವರ ಪರ ಚುನಾವಣೆ ಪ್ರಚಾರ ಮಾಡಿದೆ. ನನಗೂ, ಅನ್ಸಾರಿಗೂ ವೈಯಕ್ತಿಕ ವೈಷಮ್ಯ ಇಲ್ಲ. ಹಿಂದೆ ರಾಜಕಾರಣದಲ್ಲಿದ್ದಾಗ, ಒಬ್ಬರಿಗೊಬ್ಬರು ನಿಂದಿಸಿಕೊಂಡಿದ್ದೆವು’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ. ಸರ್ಕಾರ ವರದಿ ಸಲ್ಲಿಸಿ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಭರವಸೆ ನೀಡುವ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ ಅವರನ್ನು ಸಚಿವರಾಗಿ ಮಾಡುವಂತೆ ಒತ್ತಾಯಿಸುತ್ತೇವೆ. ಜೊತೆಗೆ ಕನಕಗಿರಿಯಿಂದ ಪಕ್ಷ ಸಂಘಟನೆ ಆರಂಭಿಸಿ, ಕಲ್ಯಾಣ ಕರ್ನಾಟಕ ಭಾಗ ಸುತ್ತಾಡಿ ಕಾರ್ಯಕರ್ತರಿಗೆ ನ್ಯಾಯ ದೊರಕಿಸಲು ಹೋರಾಟ ಮಾಡುತ್ತೇನೆ’ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ಸುರೇಶಗೌರಪ್ಪ, ಅಯುಬ್ ಖಾನ್, ಮಹೇಶ, ರಾಜಶೇಖರ ಮುಸ್ಟೂರು, ರಾಮಣ್ಣ, ಶಬ್ಬಿರ್ ಭರಣಿ, ಸೈಯದ್ ನಾಜಿರ್, ಜೋಗದ ವಸಂತ ನಾಯಕ, ಮಹ್ಮದ್ ಅಲಿ, ಶೇಖರಗೌಡ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-35-568208486

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.