ಗಂಗಾವತಿ: ಗೋಹತ್ಯೆ ನಿಷೇಧ, ಗೋ ಸಂರಕ್ಷಣೆಗಾಗಿ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿಠಲ್ ನಾವಡೆ ಮಾತನಾಡಿ, ‘ಗೋವು ರಾಷ್ಟ್ರೀಯ ತಾಯಿ, ಕೃಷಿ ಕ್ಷೇತ್ರದಲ್ಲಿ ಗೋಮುತ್ರ ಬಳಕೆಗೆ ಸರ್ಕಾರ ಆದ್ಯತೆ ನೀಡಬೇಕು. ಸರ್ಕಾರ ಗೋವಿನ ಹಾಲು, ಮೊಸರು, ತುಪ್ಪಕ್ಕೆ ಪ್ರೋತ್ಸಾಹ ನೀಡಬೇಕು. ಗೋಮುತ್ರಕ್ಕೆ ಸಂಬಂಧಿಸಿದ ಸಂಸ್ಕರಣಾ ಘಟಕ ಉತ್ತೇಜಿಸಬೇಕು’ ಎಂದರು.

‘ಸರ್ಕಾರಿ ಕಟ್ಟಡ, ಆಸ್ಪತ್ರೆಗಳ ಬಣ್ಣ ಗೋಮಯ ಬಣ್ಣವಾಗಿ ಬದಲಿಸಬೇಕು. ಸರ್ಕಾರಿ ದೇವಸ್ಥಾನಗಳಲ್ಲಿನ ಪೂಜೆಗೆ ದೇಸಿ ತಳಿಗಳ ಹಾಲು, ಮೊಸರು, ತುಪ್ಪ ಬಳಸಬೇಕು. ಕೈಬಿಟ್ಟ ದನಗಳ ರಕ್ಷಣೆಗೆ ಅನುದಾನ, ಮೇವು ಒದಗಿಸುವ ಜೊತೆಗೆ ಗೋಶಾಲೆ ನಿರ್ಮಿಸಬೇಕು’ ಎಂದರು.

‘ಗೋಹತ್ಯೆ ಮತ್ತು ಸಾಗಾಣಿಕೆ ಮಾಡುವವರಿಗೆ ಜೀವಾವಧಿ ಶಿಕ್ಷೆ, ಏಕಬಳಕೆ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಬೇಕು. ಜಾತ್ರೆ ಹೆಸರಿನಲ್ಲಿ ಪ್ರಾಣಿವಧೆ ನಿಯಂತ್ರಣಕ್ಕೆ ಬರಬೇಕು. ಜಿಲ್ಲಾ ಮಟ್ಟದಲ್ಲಿ ಪಂಚಗವ್ಯ ಆಸ್ಪತ್ರೆ ನಿರ್ಮಿಸಬೇಕು. ಗೋ ಸೇವಾ ತರಬೇತಿ ಶಿಬಿರಗಳನ್ನು ಕಡ್ಡಾಯವಾಗಿ ನಡೆಸಬೇಕು’ ಎಂದು ಒತ್ತಾಯಿಸಿದರು.

ಆನೆಗೊಂದಿ ದುರ್ಗಾದೇವಿ ಬೆಟ್ಟದರಾಜಣ್ಣ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಉಗಮರಾಜ್ ಜೈನ್, ಜಿಲ್ಲಾ ಕೋಶಾಧ್ಯಕ್ಷ ಸತ್ಯನಾರಾಯಣ ದರೋಜಿ, ಚಿದಾನಂದಪ್ಪ ವೀರಘಂಟಿ, ಸುಧೀಂದ್ರ ನವಲಿ, ಡಾ.ವಿಶ್ವನಾಥ ಕುಷ್ಟಗಿ, ಸಂಗಮೇಶ, ರವೀಂದ್ರ, ಮದನ್, ವಿಜಯಕುಮಾರ ಅಚ್ಚಪ್ಪ, ಸದಾನಂದ ಶೇಟ್, ಬುಲಾಲ್ ಭಾಂಟಿಯಾ, ನಿರ್ಮಲ್ ಜೈನ್, ಮನೀಷ್ ಬಂಬ್, ದೀಪಕ್ ಭಾಂಟಿಯಾ, ಮಂಜು ಕಟ್ಟಿಮನಿ, ರವಿ ಹಿರೇಮಠ, ರಾಹುಲ್ ಗೋಗಡೆ, ಕುಮಾರ ಹೂಗಾರ, ವಿಕ್ರಮ್, ಎ.ಕೆ. ಮಹೇಶ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-35-1782699449

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.