ಗಂಗಾವತಿ: ಇಲ್ಲಿನ ಕಿಲ್ಲಾ ಪ್ರದೇಶದ 6ನೇ ವಾರ್ಡ್ನಲ್ಲಿ ಒಳಚರಂಡಿ (ಯುಜಿಡಿ) ಪೈಪ್ ಕಟ್ಟಿಕೊಂಡಿದ್ದು, ಕೊಳಚೆ ನೀರು ಮನೆಗಳ ಮುಂದೆ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿರುವ ವಾರ್ಡ್ನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಾರ್ಡ್ನ ನಿವಾಸಿ ಅಂಜಿನಮ್ಮ ಮಾತನಾಡಿ, ‘ಒಳಚರಂಡಿ ಸ್ವಲ್ಪ ಕಟ್ಟಿಕೊಂಡರೂ ಮನೆಗಳಿಗೆ ಕೊಳಚೆ ನೀರು ನುಗ್ಗುತ್ತದೆ. ಮಳೆ ಬಂದರೇ ನಮ್ಮ ಪರಿಸ್ಥಿತಿ ಹೇಳ ತೀರದು. ಇಲ್ಲಿ ಬದುಕುವುದೇ ಕಷ್ಟವಾಗಿದೆ. ಒಳಚರಂಡಿ ಕಟ್ಟಿಕೊಂಡರೆ ಕೊಳೆಚೆ ನೀರು ಸಿಸಿ ರಸ್ತೆ ಮೇಲೆ ನಿಂತು ಪಾಚಿ ಹಿಡಿದಿವೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿ, ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿದೆ. ಈ ದುರ್ವಾಸನೆಗೆ ಊಟ ಸೇರುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ವಾಸನೆಗೆ ಮಕ್ಕಳು ಹಲವು ಬಾರಿ ವಾಂತಿ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಒಳಚರಂಡಿ ಕಟ್ಟಿಕೊಂಡು ಸರಿಪಡಿಸುವಂತೆ ನಗರಸಭೆ ಸದಸ್ಯರಿಗೆ, ನಗರಸಭೆಗೆ ಹಲವು ಬಾರಿ ದೂರು ನೀಡಿದ್ದು, ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಸ್ತೆಯಲ್ಲಿ ಸಂಚಾರ ಮಾಡೋಕೆ ಆಗದಷ್ಟು ಕೊಳಚೆ ನೀರು ನಿಲ್ಲುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಿಲ್ಲಾ ಪ್ರದೇಶದ ಮತ್ತೊಬ್ಬ ನಿವಾಸಿ ಮೊಹಮ್ಮದ್ ಖಾಜಾವಲಿ ದರ್ವೇಶ ಮಾತನಾಡಿ, ‘ವಾರ್ಡ್ನಲ್ಲಿ ಒಟ್ಟು 19 ಕ್ರಾಸ್ಗಳಿದ್ದು, ಎಲ್ಲ ಕ್ರಾಸ್ನಲ್ಲಿ ಒಳಚರಂಡಿ ಸಮಸ್ಯೆಯಿದೆ. ಒಳಚರಂಡಿ ಪೈಪ್ ಕಟ್ಟಿಕೊಂಡರೆ ಮಾತ್ರ ನಗರಸಭೆ ಸಮಸ್ಯೆ ನೀಗಿಸಿ ಹೋಗುತ್ತಿ ದ್ದು, ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡುತ್ತಿಲ್ಲ. ಎಲ್ಲ ಕ್ರಾಸ್ಗಳಲ್ಲಿರುವ ಚೇಂಬರ್ಗಳು ಕಟ್ಟಿಕೊಂಡಿದ್ದು, ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಹಿಂದೆ ಒಳಚರಂಡಿ ಪೈಪ್ಲೈನ್ ಮೂಲ ಚೇಂಬರ್ ಕಾಣುತ್ತಿತ್ತು. ಅದರ ಮೇಲೆ ಸಿಸಿರಸ್ತೆ ನಿರ್ಮಾಣ ಮಾಡಿದ್ದು, ಸದ್ಯ ಅದು ಕಾಣದಂತಾಗಿದೆ. 2 ವರ್ಷಗಳಿಂದ ಒಳಚರಂಡಿ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ, ಸಿಬ್ಬಂದಿ ಇಬ್ರಾಹಿಂ, ಆಸ್ಮಾ ಅವರ ಗಮನಕ್ಕೆ ತಂದರೂ ಕೆಲಸ ಮಾಡುತ್ತಿಲ್ಲ. ಮನೆ ಮುಂದೆ, ಒಳಗೆ ನುಗ್ಗುವ ಕೊಳಚೆ ನೀರು ದುರ್ವಾಸನೆ ನಮಗೆಲ್ಲ ಸಾಕಾಗಿದೆ. ನಮಗೆ ಶಾಶ್ವತ ಪರಿಹಾರಬೇಕು’ ಎಂದು ಒತ್ತಾಯಿಸಿದರು.

ವಾರ್ಡ್ನ ನಿವಾಸಿಗಳೆಲ್ಲರೂ ರೋಗ-ರುಜಿನಗಳಿಂದ ಕಿಲ್ಲಾ ಏರಿಯಾವನ್ನು ರಕ್ಷಣೆ ಮಾಡಬೇಕು. ಇಲ್ಲವಾದರೆ ನಗರಸಭೆ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ವಾರ್ಡ್ನ ನಿವಾಸಿಗಳಾದ ಶಾಂತಮ್ಮ, ಲಕ್ಷ್ಮಿ, ಸೈಯದ್ ಜಿಲಾನಿ ಪಾಷ, ಹಮೀದ್ ಅಕ್ಬರ್ ಉರ್ಫ್, ಸೈಯದ್ ಬುರ್ಹಾನುದ್ದೀನ್, ಮುಜಾಹಿದ್, ಮೊಹಮ್ಮದ್ ಶೈಬಾಜ್, ಜಾಫರ್ ಸಾಧೀಕ್, ಮೊಹಮ್ಮದ್ ಗೌಸ್, ಶಬ್ಬೀರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-35-101464844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.