ಗಂಗಾವತಿ: ಮುಂಗಾರು-ಹಂಗಾಮು ಕೃಷಿ ಚಟುವಟಿಕೆಗೆ ಬೇಕಾಗುವ ರಸಗೊಬ್ಬರ ಸಮರ್ಪಕ ಪೂರೈಕೆಗಾಗಿ ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಸೋಮವಾರ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಹೊಸಳ್ಳಿ ಮಾತನಾಡಿ, ‘ಈಗಾಗಲೇ ಮುಂಗಾರು ಆರಂಭಕ್ಕೆ ಮುನ್ಸೂಚನೆಗಳು ದೊರೆತಿವೆ. ಜಿಲ್ಲೆಯಲ್ಲಿ ಅಲ್ಲಲ್ಲಿ ತೊಗರಿ, ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಂಗಾವತಿ ಭಾಗದಲ್ಲಿ ಭತ್ತ ನಾಟಿಗೆ ಸಸಿಮಡಿಗಳು ಸಿದ್ಧಗೊಳ್ಳುತ್ತಿವೆ. ರೈತರಿಗೆ ಅವಶ್ಯಕವಾಗಿ ರಸಗೊಬ್ಬರಗಳು ಬೇಕಿದೆ’ ಎಂದರು.

‘ಇಂತಹ ಸಮಯದಲ್ಲಿ ಸರ್ಕಾರ ರಸಗೊಬ್ಬರ ವಿತರಣೆಗೆ ಎಫ್.ಐ.ಡಿ ಕಡ್ಡಾಯ ಮಾಡಿದೆ. ಇದರಿಂದಲೇ ರೈತರು ರಸ ಗೊಬ್ಬರ ಪಡೆಯಬೇಕೆಂಬ ನಿಯಮದಿಂದ ತುಂಬ ತೊಂದರೆ ಆಗುತ್ತಿದೆ. ರಸಗೊಬ್ಬರ ಪೂರೈಕೆ ಕೊರತೆಯಿಂದ ಫಸಲಿಗೆ ಬರುತ್ತಿರುವ ಬೆಳೆಗಳ ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗಾಗಿ ಕೃಷಿ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಬೇಕು. ಎಫ್.ಐ. ಡಿ ಮೂಲಕ ಪ್ರತಿ ಎಕರೆಗೆ, ಒಂದು ತಿಂಗಳಿಗೆ ಒಂದೇ ಚೀಲ ಯೂರಿಯಾ ವಿತರಣೆ ಎಂಬ ಅವೈಜ್ಞಾನಿಕ ನಿಯಮ ತಕ್ಷಣವೇ ನಿಲ್ಲಿಸಬೇಕು. ಹಾಗೇ ರೈತರು ತಮಗೆ ಬೇಕಾದ ರಸಗೊಬ್ಬರ ಖರೀದಿ ಮಾಡುವವಾಗ ಲಿಂಕ್ ಗೊಬ್ಬರಗಳಾದ ನ್ಯಾನೊ ಯೂರಿಯಾ ಸೇರಿ ಇತರೆ ರಸಗೊಬ್ಬರ ಖರೀದಿಗೆ ವಿತರಕರು ಒತ್ತಡ ಹೇರದಂತೆ ತಡೆಯಬೇಕು.ಎಫ್.ಐ.ಡಿ ಲಿಂಕ್ ಸಂಪೂರ್ಣ ರದ್ದುಪಡಿಸಬೇಕು ಎಂದರು.

ಮುತ್ತಣ್ಣ ದಾಸನಾಳ, ನಿರುಪಾದಿ ಬೆಣಕಲ್, ಹುಸೇನಪ್ಪ, ಶಿವಣ್ಣ ಬೆಣಕಲ್, ಬಾಳಪ್ಪ ಹುಲಿಹೈದರ, ಮಂಜುನಾಥ , ಎಸ್.ಕೆ.ಕನಕರಾಯ, ದುರ್ಗಪ್ಪ ಹೊಸಳ್ಳಿ, ಕೆ.ಕನಕಪ್ಪ ಪಂಪಾಪತಿ, ಚಂದ್ರಪ್ಪ, ವಿರುಪಣ್ಣ ಮೋಟಿ, ದುರುಗಪ್ಪ, ಫಕೀರಸಾಬ್, ಮಂಜಣ್ಣ, ಹನುಮೇಶ, ಗಾದೆಪ್ಪ, ಶರಣಪ್ಪ, ಮುತ್ತಣ್ಣ ಹೊಸಳ್ಳಿ, ಬಾಲಾಜಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-35-342259832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.