ಗಂಗಾವತಿ: ‘ಇಲ್ಲಿನ ಭಗೀರಥ ವೃತ್ತದ ಬಳಿಯ ಯಶೋಧಾ ಆಸ್ಪತ್ರೆ ಹಿಂಭಾಗದ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಮೇ 24 ಮತ್ತು 25ರಂದು ಹೃದಯ, ಕ್ಯಾನ್ಸರ್, ಕಿಡ್ನಿ ಸ್ಟೋನ್, ಸ್ತ್ರೀರೋಗ, ಮಂಡಿನೋವಿನ ಜತೆಗೆ ಮಕ್ಕಳ ಉಚಿತ ತಪಾಸಣೆ ಶಿಬಿರ ಜರುಗಲಿದೆ’ ಎಂದು ಡಾ. ಆರ್.ಬಿ. ಪಾಟೀಲ ಫೌಂಡೇಷನ್ ಅಧ್ಯಕ್ಷ ಆರ್.ಬಿ. ಪಾಟೀಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ‘ಸ್ತನಕ್ಯಾನ್ಸರ್, ಅಪೆಂಡಿಸೈಟಿಸ್, ಮಕ್ಕಳರೋಗ, ಸ್ತ್ರಿರೋಗ ಪ್ರಸೂತಿ, ಎಲುಬು, ಕೀಲುರೋಗ, ನರರೋಗ, ಬೆನ್ನುನೋವು, ಗುತ್ತಿಗೆ ನೋವು, ಕಿವಿ, ಮೂಗು, ಗಂಟಲು ತೊಂದರೆ, ಕಣ್ಣಿನ ತಪಾಸಣೆ, ಮೆದುಳಿನ ಗಡ್ಡೆ, ಬಿಪಿ ಶುಗರ್ ಸೇರಿ ಮೂವತ್ತಕ್ಕೂ ಹೆಚ್ಚು ಕಾಯಿಲೆಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆಸಕ್ತರು, ರೋಗಿಗಳು ತಪಾಸಣೆ ದಿನ ಆಗಮಿಸಿ, ಎಲ್ಲವನ್ನು ಪರೀಕ್ಷೆ ಮಾಡಿಕೊಳ್ಳಬಹುದು. ಇನ್ನೂ ಬಿಪಿಎಲ್, ಅಂತ್ಯೋದಯ, ಯಶಸ್ವಿನಿ ಕಾರ್ಡುದಾರರಿಗೆ ಉಚಿತ ತಪಾಸಣೆ ಚಿಕಿತ್ಸೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

ಅಂಜನಾದ್ರಿ ಗೆಜ್ಜೆ-ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಇಂಗಳಗಿ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದ ಜನರು ಖಾಸಗಿ ಆಸ್ಪತ್ರೆಗಳ ಶುಲ್ಕಕ್ಕೆ ಹೆದರಿ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ರೋಗದ ಲಕ್ಷಣಗಳು ಉಲ್ಬಣಗೊಳ್ಳುತ್ತಿದ್ದು, ಅವರಿಗಾಗಿ ಶಿಬಿರ ಆಯೋಜಿಸಲಾಗಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ರಾಜ್ಯಧ್ಯಕ್ಷ ಶಿವಕುಮಾರಗೌಡ, ಕಾರ್ಮಿಕ ಮುಖಂಡ ರಾಮು ಹಂಚಿನಾಳ, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಗೋಪಾಲ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-35-659061440

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.