ಗಂಗಾವತಿ: ತಾಲ್ಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನವಾಗಿ ನೀಡಿದ ಆಸ್ತಿಯಲ್ಲಿ ಮೂರು ಎಕರೆಯನ್ನು ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಹೊಸಳ್ಳಿ ಗ್ರಾಮಸ್ಥರು ಮಂಗಳವಾರ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಅಧಿಕಾರಿ ಮಹಾಂತೇಶ ಗೌಡ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮಸ್ಥ ಮಲ್ಲಪ್ಪ ಪಾರಿವಾಳ ಮಾತನಾಡಿ, ‘ಗಂಗಾವತಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ (ವಿರೂಪಾಪುರ ಸೀಮೆ) ಸರ್ವೆ ಸಂಖ್ಯೆ 16/2/4 ರಲ್ಲಿನ ಐದು ಎಕರೆ ಭೂಮಿಯನ್ನು 1980ರಲ್ಲಿ ಅಂದಿನ ಕಲ್ಮಠದ ಚನ್ನಬಸವಸ್ವಾಮಿ ಗುರುಕೊಟ್ರ ಸ್ವಾಮೀಜಿ ಅವರು ಹೊಸಳ್ಳಿ ಸರ್ಕಾರಿ ಶಾಲೆಗೆ ದಾನವಾಗಿ ನೀಡಿದ್ದರು. ಅದರಲ್ಲಿನ 2 ಎಕರೆ ಭೂಮಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿದ್ದು, ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 5 ಎಕರೆ ಆಸ್ತಿ ಕಳೆದ 45 ವರ್ಷಗಳಿಂದ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರ ಹೆಸರಿನಲ್ಲಿ ಇದೆ. ಆದರೆ ಕಲ್ಮಠದ ಕೊಟ್ಟೂರೇಶ್ವರ ಸ್ವಾಮೀಜಿ ದುರುದ್ದೇಶದಿಂದ ದಾನ ನೀಡಿದ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ’ ಎಂದು ದೂರಿದರು.

ಗ್ರಾಮಸ್ಥ ಮಹೇಶ ಡಿ. ಮಾತನಾಡಿ, ‘ಸರ್ಕಾರಿ ಶಾಲೆಗೆ ದಾನವಾಗಿ ನೀಡಿದ ಆಸ್ತಿಯನ್ನು ಕೊಟ್ಟೂರೇಶ್ವರ ಸ್ವಾಮೀಜಿ, ಮರಳಿ ಪಡೆಯುವ ಪ್ರಯತ್ನವೇಕೆ? ಯಾವ ಕಾರಣಕ್ಕೆ ಶಾಲೆ ಆಸ್ತಿ ಪಡೆಯಲಾಗುತ್ತಿದೆ ಎಂಬುದು ಬಹಿರಂಗವಾಗಬೇಕು. ಹೊಸಳ್ಳಿ ಶಾಲೆಗೆ ಸರಿಯಾದ ಮೈದಾನವಿಲ್ಲ. ಸೂಕ್ತ ಸೌಲಭ್ಯಗಳಿಲ್ಲ. ಹೀಗಿದ್ದಾಗ ದಾನ ನೀಡಿದ ಆಸ್ತಿ ಪಡೆಯುವ ಹುನ್ನಾರವೇನು? ಈ ಆಸ್ತಿ ವರ್ಗಾವಣೆ ವಿಷಯದಲ್ಲಿ ಅಧಿಕಾರಿಗಳ ಸಹಕಾರವೂ ಇರುವ ಸಂಶಯವಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಶಾಲಾ ಮಕ್ಕಳು ‘ನಮ್ಮ ಶಾಲೆ, ನಮ್ಮಹಕ್ಕು’, ‘ನಮ್ಮ ಕನ್ನಡ ಶಾಲೆಯನ್ನು ಉಳಿಸಿ’ ಎನ್ನುವ ನಾಮಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಹೊಸಳ್ಳಿ ಗ್ರಾಮದಿಂದ ಗಂಗಾವತಿ ಕೃಷ್ಣದೇವರಾಯ ವೃತ್ತದವರೆಗೆ ಪಾದ ಯಾತ್ರೆ ನಡೆಸಿ, ಪ್ರತಿಭಟನೆ ನಡೆಸಿದರು.

ಎಸ್ಎಫ್ಐ ಸಂಘಟನೆಯ ಶಿವಕುಮಾರ, ಬಾಲು ಚಳ್ಳಾರಿ, ಗ್ಯಾನೇಶ, ಗ್ರಾಮಸ್ಥರಾದ ವಿನಾಯಕ ಬಡಿಗೇರ, ಚನ್ನಪ್ಪ ಅಕ್ಕಿ, ಬಾಲಾಜಿ, ಮಲ್ಲಪ್ಪ ಕುಟ್ಟಿಗಿ, ಶಂಕರಗೌಡ, ಗುರಪ್ಪ, ಸಿದ್ದಪ್ಪ, ಸಿದ್ದಪ್ಪ ಕರೆಕುರಿ, ರಮೇಶ ಮೋಟಿ, ಮಲ್ಲಿಕಾರ್ಜುನ ಅಗೆದಾಳ, ರಗಡಪ್ಪ, ಮರಿಯಪ್ಪ, ಹನುಮೇಶ, ಆಂಜನೇಯ, ಶಿವರಾಜ, ನಾರಾಯಣಪ್ಪ, ದೇವೇಂದ್ರ, ರಾಜಾಸಾಬ, ವಿರೂಪಾಕ್ಷಿ ರೇಷ್ಮೆ, ವೀರೇಶ ಸೋಮಲಾಪುರ, ಸೋಮನಾಥ, ಕೃಷ್ಣ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-35-517564963

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.