ಗಂಗಾವತಿ: ‘ಹಲವು ದಶಕಗಳಿಂದ ಕನಸಾಗಿಯೇ ಉಳಿದಿದ್ದ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಕೊಪ್ಪಳ ಜಿಲ್ಲೆಯ ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ ಕೊನೆಗೂ ಕಾಲಕೂಡಿ ಬಂದಿದ್ದು, ಮೂರು ತಿಂಗಳ ಒಳಗೆ ಸೇತುವೆ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಲಿದೆ.

1959 ರಲ್ಲಿ ಬಳ್ಳಾರಿ-ಕೊಪ್ಪಳ ಜಿಲ್ಲೆಯ ನಡುವೆ ದೂರದ ಪ್ರಯಾಣ ತಪ್ಪಿಸಲು ರಾಜ್ಯಹೆದ್ದಾರಿ 29ರ ಚಿಕ್ಕಜಂತಕಲ್-ಕಂಪ್ಲಿ ನಡುವೆ ಸೇತುವೆ ನಿರ್ಮಿಸಿ 1961ರಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವರ್ಷಗಳು ಉರುಳಿದಂತೆ ಸೇತುವೆ ಶಿಥಿಲವಾದ ಸ್ಥಿತಿಗೆ ತಲುಪಿದೆ.

ನದಿಗೆ 1ಲಕ್ಷ ಕ್ಯೂಸೆಕ್ಗೂ ಹೆಚ್ಚು ನೀರು ಹರಿಸಿದಾಗ ಸೇತುವೆ ಮುಳುಗಡೆಯಾಗಿ ಕನಿಷ್ಠ 10 ದಿನಗಳಿಂದ 25 ದಿನಗಳವರೆಗೆ ರಸ್ತೆ ಸಂಪರ್ಕ ಕಡಿತವಾಗುತ್ತಿತ್ತು. ವಿದ್ಯಾರ್ಥಿಗಳು, ರೋಗಿಗಳು, ಕಾರ್ಮಿಕರು, ಸಾರ್ವಜನಿಕರು ಅನಿವಾರ್ಯವಾಗಿ ಬುಕ್ಕಸಾಗರ ಸೇತುವೆ ಮೂಲಕ 30 ಕಿ.ಮೀ ಸುತ್ತಿ, ಬಳ್ಳಾರಿ, ಕಂಪ್ಲಿ, ಗಂಗಾವತಿಗೆ ಸಂಚರಿಸುತ್ತಿದ್ದರು.

ಹಲವು ದಶಕಗಳಿಂದ ಗಂಗಾವತಿ ಮತ್ತು ಕಂಪ್ಲಿ ಭಾಗದ ಜನರು ಅವಘಡ ಸಂಭವಿಸುವ ಭೀತಿಯಲ್ಲೆ ಸೇತುವೆ ಮೇಲೆ ಸಂಚಾರ ಮಾಡುತ್ತಾ, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು. ನೂತನ ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಾಡುತ್ತಿದ್ದರು. 2025ರ ಜೂನ್ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸೇತುವೆ ವೀಕ್ಷಿಸಿ, ನೂತನ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು.

ಸೇತುವೆ ನಿರ್ಮಾಣಕ್ಕೆ ₹100ಕೋಟಿ: ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ 2025-26ನೇ ಸಾಲಿನಲ್ಲಿ ತನ್ನ ವ್ಯಾಪ್ತಿಗೆ ಬರುವ ಸೇತುವೆಗಳ ನಿರ್ಮಾಣ, ಪುನಶ್ಚೇತನ ಕಾಮಗಾರಿಗಾಗಿ ಪ್ರಾಮ್ಸ್ ಅಧ್ಯಯನದಲ್ಲಿ ಗುರುತಿಸಿದ ಒಟ್ಟು 39 ಸೇತುವೆಗಳ ನಿರ್ಮಾಣ, ಪುನಶ್ಚೇತನ ಕಾಮಗಾರಿಗೆ ₹1ಸಾವಿರ ಕೋಟಿ ಅನುದಾನ ಮೀಸಲಿಟ್ಟು, ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಇದರ ಅಡಿಯಲ್ಲಿ ಗಂಗಾವತಿ-ಕಂಪ್ಲಿಗೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ ₹100 ಕೋಟಿ ಮೀಸಲಿಡಲಾಗಿದೆ.

ಮೇ.16ಕ್ಕೆ ಅಂದಾಜು ಪರಿಶೀಲನಾ ಸಮಿತಿಗೆ ವರದಿ ಸಲ್ಲಿಕೆ: ಗಂಗಾವತಿ-ಕಂಪ್ಲಿ ನಡುವೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯ ಬಳ್ಳಾರಿ ವಿಭಾಗದ ಅಧಿಕಾರಿಗಳು ಸೂಕ್ತಸ್ಥಳ, ಮಣ್ಣು ಪರೀಕ್ಷೆ, ನದಿ ತೀರದ ಭೌಗೋಳಿಕ ಸ್ಥಿತಿ, ಬೇಕಾಗುವ ಭೂಮಿ, ನೀರಿನ ಹರಿವಿನ ಪ್ರಮಾಣ, ಸೇತುವೆಯ ರೂಪುರೇಷ, ಬೇಕಾಗುವ ಭೂಮಿ ಕುರಿತ ಅಧ್ಯಯನ ನಡೆಸಿ, ಡಿಪಿಆರ್ ಸಿದ್ದಪಡಿಸಿದ್ದು, ಮೇ 16ರಂದು ನಡೆಯುವ ರಾಜ್ಯಮಟ್ಟದ ಅಂದಾಜು ಪರಿಶೀಲನಾ ಸಮಿತಿಗೆ ಪಟ್ಟಿಸಲ್ಲಿಕೆ ಮಾಡಲಾಗುತ್ತದೆ.

ನೂತನ ಸೇತುವೆಯ ರೂಪುರೇಷ: ಗಂಗಾವತಿ (ಚಿಕ್ಕಜಂತಕಲ್)- ಕಂಪ್ಲಿ ನಡುವೆ ನಿರ್ಮಿಸುವ ನೂತನ ಸೇತುವೆ ಉದ್ದ 700 ಮೀಟರ್, ಅಗಲ 10 ಮೀಟರ್ ಇರಲಿದೆ. ಇನ್ನು ಈ ಸೇತುವೆ ನಿರ್ಮಾಣಕ್ಕೆ ಚಿಕ್ಕಜಂತಕಲ್ ಬಳಿ 3 ಎಕರೆ, ಕಂಪ್ಲಿ ಕಡೆ 3 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಿದೆ. ಇ.ಆರ್.ಸಿಗೆ ಅಂದಾಜುಪಟ್ಟಿ ಒಪ್ಪಿಗೆಯಾದರೇ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆ, ಟೆಂಡರ್ ಆಹ್ವಾನಿಸಿ, ಕಾಮಗಾರಿಗೆ ಚಾಲನೆ ನೀಡಲು ಇಲಾಖೆ ಸಜ್ಜಾಗಿ ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.