ಗಂಗಾವತಿ: ಕೇಂದ್ರ ಬಿಜೆಪಿ ಸರ್ಕಾರ ಮನರೇಗಾ ಕಾಯ್ದೆ, ಅದರ ಹಕ್ಕು ಸ್ವರೂಪ ಬದಲಾಯಿಸಿ, ವಿಬಿರಾಮ್ ಜಿ ಹೆಸರಿನ ಅಡಿಯಲ್ಲಿ ಯೋಜನೆ ಜಾರಿ ಮಾಡಿರುವುದು ಖಂಡನೀಯ. ಕೂಡಲೇ ವಿಬಿ ರಾಮ್ ಜಿ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ತಾಲ್ಲೂಕಿನ ಹೊಸಕೇರಾ ಗ್ರಾ.ಪಂ ಪಿಡಿಒ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ರಾಜ್ಯಾಧ್ಯಕ್ಷ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ‘2004-2005ರಲ್ಲಿ ಮನಮೋಹನ ಸಿಂಗ್ ನೇತೃತ್ವದ ಸರ್ಕಾರ ಉದ್ಯೋಗಖಾತ್ರಿ ಯೋಜನೆ ಜಾರಿಗೆ ಮಾಡಿ, ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರ ಜೀವನೋಪಯಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಇದೀಗ ಕೇಂದ್ರ ಬಿಜೆಪಿ ಸರ್ಕಾರ ಮನರೇಗಾ ಯೋಜನೆಯ ಸ್ವರೂಪ, ಹಕ್ಕು ಬದಲಾಯಿಸಿ, ನೂತನವಾಗಿ ವಿಬಿ ರಾಮ್ ಜಿ ಯೋಜನೆ ಜಾರಿಗೆ ಮಾಡಿದೆ. ಮನರೇಗಾದಲ್ಲಿ ಯಂತ್ರಗಳ ಬಳಕೆ ಅವಕಾಶವಿರಲಿಲ್ಲ. ನೂತನ ಯೋಜನೆಯಲ್ಲಿ ಯಂತ್ರಗಳ ಬಳಕೆಗೆ ಅವಕಾಶ ನೀಡಿ, ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿತ್ತಿದೆ. ಇದರಿಂದ ಕೂಲಿಕಾರರಿಗೆ ಕೆಲಸವೇ ಇಲ್ಲದಂತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಜಿಲ್ಲಾ ಮುಖಂಡ ಹುಸೇನಪ್ಪ ಕೆ. ಮಾತನಾಡಿ, ‘ವಿಬಿರಾಮ್ ಜಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40 ಅನುದಾನ ನೀಡಬೇಕೆನ್ನುವ ಆದೇಶ ಕೇಂದ್ರ ಸರ್ಕಾರ ನೀಡಿದ್ದು, ಇದು ಕೂಲಿಕಾರರಿಗೆ ವಂಚನೆ ಮಾಡುವ ಕೆಲಸವಾಗಿದೆ. ಕೆಲಸ ಮಾಡಿದ ನಂತರ ಎರಡು ಸರ್ಕಾರಗಳು, ಒಬ್ಬರ ಮೇಲೆ ಒಬ್ಬರೂ ಅನುದಾನ ನೀಡಿಲ್ಲ ಎನ್ನುವ ಸುಳ್ಳುಗಳು ಹೇಳಿಕೆ ನೀಡಿ ಕೂಲಿಕಾರರನ್ನು ಯಾಮಾರಿಸುವ ಅವಕಾಶಗಳಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ನೀತಿಯನ್ನು ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕ ಸಂಘ ಬಲವಾಗಿ ಖಂಡಿಸುತ್ತದೆ. ಕೂಡಲೇ ಹೊಸ ಯೋಜನೆ ರದ್ದುಪಡಿಸಿ, ಬೆಳಿಗ್ಗೆ 7 ರಿಂದ 11 ಗಂಟೆ ಒಳಗೆ ಉದ್ಯೋಗ ಖಾತ್ರಿ ಕೆಲಸ, ಕಾಯಕ ಬಂಧುಗಳಿಗೆ ಪ್ರೋತ್ಸಹ ಧನ ವಿತರಣೆ, 200 ದಿನಗಳ ಕೆಲಸ, ₹ 700 ಕೂಲಿಹಣ, ರೈತರ ಟ್ರ್ಯಾಕ್ಟರ್ಗಳಿಗೆ ಬಾಡಿಗೆ ಹಣ, ಕನಕಗಿರಿ ತಾಲ್ಲೂಕು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್, ಸಿಸಿ ರಸ್ತೆ, ಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರು, ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಮಂಜುನಾಥ ಹೊಸಕೇರಾ ಡಗ್ಗಿ, ಭೀಮಪ್ಪ ಪೂಜಾರ, ಗಂಗಾಧರ ಡಗ್ಗಿ, ಪುರುಷೋತ್ತಮ, ಪಾಮಣ್ಣ, ಯಮನೂರ, ಹುಲ್ಲೇಶ, ಹನುಮಂತಪ್ಪ, ದುರ್ಗೇಶ, ಕಂಟೆಪ್ಪ, ರಮೇಶ, ಮರಿಯಮ್ಮ, ಹುಲಿಗೆಮ್ಮ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-35-1033071433

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.