ಗಂಗಾವತಿ: ನಗರದ ಪಾದಚಾರಿ ಮಾರ್ಗದಲ್ಲಿ ಅಂಗಡಿ ವ್ಯಾಪರಸ್ಥರು ಶೆಲ್ಟರ್, ಮೆಟ್ಟಿಲು ನಿರ್ಮಿಸಿಕೊಂಡು, ವ್ಯಾಪಾರದ ಸಾಮಗ್ರಿ ಸಂಗ್ರಹ ಮಾಡಿಕೊಂಡಿದ್ದ ಪಾದಚಾರಿ ಮಾರ್ಗದಲ್ಲಿನ ಒತ್ತುವರಿಯನ್ನು ಬುಧವಾರ ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ನಗರದ ವಿವಿಧ ವೃತ್ತಗಳಲ್ಲಿನ ಪಾದಚಾರಿ ಮಾರ್ಗದಲ್ಲಿ ಅಂಗಡಿ ಮತ್ತು ಬೀದಿ ಬದಿ ವ್ಯಾಪಾರಸ್ಥರು, ವ್ಯಾಪಾರದ ಸಾಮಗ್ರಿಗಳು ಸಂಗ್ರಹಿಸಿಕೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಉಂಟು ಮಾಡಿದ್ದರು. ಈ ಕುರಿತು ಸುಮೋಟೊ ಪ್ರಕರಣ ದಾಖಲಾಗಿತ್ತು.

ಇದರನ್ವಯ ಬುಧವಾರ ಬೆಳಿಗ್ಗೆ ನಗರಸಭೆ ಸಿಬ್ಬಂದಿ ಪೊಲೀಸ್ ಇಲಾಖೆ ಅಧಿಕಾರಿಗಳ ಸಹಯೋಗ, ಬಂದೋಬಸ್ತಿನಲ್ಲಿ ಎರಡು ಜೆಸಿಬಿ ಮೂಲಕ ಪಾದಚಾರಿ ಮಾರ್ಗ ತೆರವು ಕಾರ್ಯಚರಣೆ ನಡೆಸಿದರು.

ಬೆಳಿಗ್ಗೆ ಚಿಕನ್ ಮಾರುಕಟ್ಟೆ, ಗಾಂಧಿವೃತ್ತ, ಮಹಾವೀರ ವೃತ್ತ, ಸೇರಿ ವಿವಿಧ ಸ್ಥಳಗಳಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆಸಲಾಯಿತು. ತೆರವಿನ ನಂತರ ಕೆಲ ಸಾಮಗ್ರಿಗಳನ್ನು ಟ್ರಾಕ್ಟರ್ ಮೂಲಕ ನಗರಸಭೆಗೆ ತೆಗೆದುಕೊಂಡು ಒಯ್ಯಲಾಯಿತು.

ನಂತರ ವಿವಿಧ ವೃತ್ತ ಮತ್ತು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡ ವ್ಯಾಪಾರಸ್ಥರಿಗೆ ಸ್ವಯಂ ಪ್ರೇರಿತವಾಗಿ ಶೆಲ್ಟರ್, ಅಂಗಡಿ ತೆರವು ಮಾಡಿಕೊಂಡು, ನಗರದ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಗೆ ಸ್ಥಳಾಂತರವಾಗುವಂತೆ ಸೂಚನೆ ನೀಡಿ, ಒಂದು ವೇಳೆ ಒತ್ತುವರಿ ತೆರವು ಮಾಡಿಕೊಳ್ಳದಿದ್ದರೇ ಜೆಸಿಬಿ ಮೂಲಕ ತೆರವು ಮಾಡಲಾಗುತ್ತದೆ ಎಂದರು.

ಈ ವೇಳೆ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ನಗರಠಾಣೆ ಪಿಐ ಪ್ರಕಾಶ ಮಾಳೆ, ನಗರಸಭೆ ಆರೋಗ್ಯ ನಿರೀಕ್ಷಕ ನಾಗರಾಜ ಸೇರಿ ಪೊಲೀಸ್ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-35-1301921533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.