ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿನ ಕೃಷಿ ಇಲಾಖೆ ಅಧೀನದ (ಸಾರಿಗೆ ಇಲಾಖೆಗೆ ವರ್ಗಾವಣೆಯಾದ) 5 ಎಕರೆಯಲ್ಲಿ ಸುಸಜ್ಜಿತ ಸ್ಯಾಟ್ಲೈಟ್ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಕಲ್ಯಾಣ ಕರ್ನಾಟಕದ ಎರಡನೇ ಮಾದರಿ ಬಸ್ ನಿಲ್ದಾಣವಾಗಲಿದೆ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.

ನಗರದಲ್ಲಿ ನಡೆದ ಸ್ಯಾಟ್ಲೈಟ್ ಬಸ್ ನಿಲ್ದಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಶಂಕುಸ್ಥಾಪನೆ ಸಮಾರಂಭ ದಲ್ಲಿ ಅವರು ಮಾತನಾಡಿದರು.

‘ಕೆಕೆಆರ್ಡಿಬಿಯಿಂದ ₹15 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಿಂದ ₹2.5 ಕೋಟಿ ಸೇರಿ ಒಟ್ಟು ₹17.5 ಕೋಟಿ ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಮಹಿಳಾ ಕೊಠಡಿ, ಉಪಾಹಾರ ಗೃಹ, ಶೌಚಾಲಯ, ಕುಡಿಯುವ ನೀರು, ಪಾರ್ಕಿಂಗ್ ಸೇರಿ ಅಗತ್ಯ ಸೌಕರ್ಯಗಳು ಕಲ್ಪಿಸಲಾಗುತ್ತದೆ. ಅಂಜನಾದ್ರಿ ಬಳಿ 5 ಎಕರೆಯಲ್ಲಿ ಸ್ಯಾಟ್ಲೈಟ್ ಬಸ್ ನಿಲ್ದಾಣಕ್ಕೆ ಚಿಂತನೆ ನಡೆಸಲಾಗಿದೆ’ ಎಂದರು.

‘ಗಂಗಾವತಿ ಸ್ಯಾಟ್ಲೈಟ್ ಬಸ್ ನಿಲ್ದಾಣದವರೆಗೆ ಚತುಷ್ಪಥ ರಸ್ತೆ ಮಾಡಲು ಕಾರ್ಯಕೈಗೊಳ್ಳಲಾಗಿದೆ. ಗಂಗಾವತಿ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ₹35 ಕೋಟಿ ಅನುದಾನ ಟೆಂಡರ್ ಕರೆಯಲಾಗುತ್ತದೆ. ಅದರ ನಿರ್ಮಾಣದ ನಂತರ ಅಂಜನಾದ್ರಿ-ಅಯೋಧ್ಯ, ಅಯೋಧ್ಯ-ಅಂಜನಾದ್ರಿ ನೇರ ಸಂಚಾರಕ್ಕೆ ಪ್ರತ್ಯೇಕ 2 ರೈಲು ಬಿಡಿಸಲಾಗುತ್ತದೆ’ ಎಂದರು.

ಸಿಎಂ ನೀಡಿದ ₹25 ಕೋಟಿ ಅನುದಾನದಲ್ಲಿ ಆನೆಗೊಂದಿ ಭಾಗದ ಐತಿಹಾಸಿ ಸ್ಮಾರಕಗಳ ರಕ್ಷಣೆಗಾಗಿ ₹5 ಕೋಟಿ, ಗ್ರಾಮ ಅಭಿವೃದ್ಧಿಗೆ ₹5 ಕೋಟಿ ಅನುದಾನ ನೀಡಿದ್ದು, ಕೆಲಸಗಳು ಕೈಗೊಳ್ಳಬೇಕಿದೆ. ನಗರೋತ್ಥಾನದ ₹25 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿವೆ. ಗಂಗಾವತಿಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಕೆಕೆಆರ್ಟಿಸಿ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿ ಕಾರಿ ಜಿ.ಸೀನಯ್ಯ ಮಾತನಾಡಿ, ‘ಜಿಲ್ಲೆಗೆ ಸದ್ಯ 5 ಸಾರಿಗೆ ಘಟಕಗಳಿವೆ. ಒಟ್ಟು 1903 ಸಿಬ್ಬಂದಿ, 476 ಅನುಸೂಚಿ, 491 ವಾಹನ,1377 ಚಾಲನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಜಿಲ್ಲೆಯ ಬಸ್ಗಳು 1.75 ಲಕ್ಷ ಕೀ.ಮಿ. ಸಂಚಾರ ಮಾಡುತ್ತವೆ. ₹82.5 ಲಕ್ಷ ಆದಾಯವಿದೆ. 1.85 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 35 ಬಸ್ ನಿಲ್ದಾಣಗಳಿವೆ’ ಎಂದು ಹೇಳಿದರು.

ಇನ್ನೂ ಗಂಗಾವತಿ ಘಟಕದಲ್ಲಿ 104 ಅನುಸೂಚಿ, 111 ವಾಹನ, ಈ ಘಟಕದ ಬಸ್ಗಳು ಎಲ್ಲ ನಿತ್ಯ 3,950 ಕೀ.ಮಿ ಸಂಚಾರ ಮಾಡುತ್ತವೆ. ನಿತ್ಯ 36 ಸಾವಿರ ಜನ ಪ್ರಯಾಣ ಮಾಡುತ್ತಾರೆ. ಇಲ್ಲಿ 298 ಚಾಲನಾ ಸಿಬ್ಬಂದಿ, 54 ಮೆಕ್ಯಾನಿಕ್, 47 ಆಡಳಿತ ಮಂಡಳಿ ಸದಸ್ಯರು ಕೆಲಸ ಮಾಡುತ್ತಾರೆ. ಗಂಗಾವತಿ ಘಟಕಕ್ಕೆ ₹18 ಲಕ್ಷ ಆದಾಯ ಬರುತ್ತಿದೆ’ ಎಂದರು.

ತಾ.ಪಂ ಇಒ ರಾಮರೆಡ್ಡಿ ಪಾಟೀಲ, ನಗರಠಾಣೆ ಪಿಐ ಪ್ರಕಾಶ ಮಾಳೆ, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಕಾಡಾ ಮಾಜಿ ಅಧ್ಯಕ್ಷ ಗಿರೇಗೌಡ, ತಿಪ್ಪೇರುದ್ರಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ, ಚೆನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ, ಜಿ.ಶ್ರೀಧರ, ಟಿ.ಜಿ. ಬಾಬು, ಇ.ರಾಮಕೃಷ್ಣ, ವೀರೇಶ ಬಲಕುಂದಿ, ವೀರೇಶ ಸುಳೆಕಲ್, ಚಂದ್ರಶೇಖರ ಹೀರೂರು, ಡಿ.ಕೆ.ಆಗೋಲಿ, ಭಾರತಿ, ಮನೋಹರಗೌಡ ಹೇರೂರು ಸೇರಿ ಕಾರ್ಯಕರ್ತರು, ಅರಣ್ಯ ಇಲಾಖೆ ಸಿಬ್ಬಂದಿ, ಕೃಷಿ ವಿವಿ ಸಿಬ್ಬಂದಿ, ತಾಲ್ಲೂಕು ಸಿಬ್ಬಂದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-35-928075924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.