ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ವಸತಿ ನಿಲಯದಲ್ಲಿ ಅನಿಲ ಸೋರಿಕೆ, 160 ವಿದ್ಯಾರ್ಥಿನಿಯರು ಅಪಾಯದಿಂದ ಪಾರು

Last Updated 23 ಮಾರ್ಚ್ 2022, 20:06 IST
ಅಕ್ಷರ ಗಾತ್ರ

ಕೊಪ್ಪಳ: ನಗರದ 25ನೇ ವಾರ್ಡಿನ ಫಿರ್ದೋಸ್ ನಗರದ ಬಳಿ ಇರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಏಕಾಏಕಿ ಅನಿಲ ಸೋರಿಕೆ ಉಂಟಾಗಿದ್ದರಿಂದ ವಸತಿ ನಿಲಯದ ವಿದ್ಯಾರ್ಥಿನಿಯರು ಗಾಬರಿಗೊಂಡು ವಸತಿ ನಿಲಯದಿಂದ ಹೊರಗೆ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.

ಈ ವಸತಿ ನಿಲಯದಲ್ಲಿ 160 ಜನ ವಿದ್ಯಾರ್ಥಿನಿಯರು ಇದ್ದರು. ಅನಿಲ ಸೋರಿಕೆಯ ದುರ್ಘಟನೆಯಲ್ಲಿ ಕೊಪ್ಪಳ ತಾಲ್ಲೂಕಿನ ಕಲಿಕೇರಿ ಗ್ರಾಮದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ದ್ಯಾಮವ್ವ ಎಂಬ ವಿದ್ಯಾರ್ಥಿ ಮೂರ್ಚೆಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಈ ಅನಿಲ ಸೋರಿಕೆಯ ದುರ್ನಾತ ಹಾಗೂ ಕಣ್ಣಿನಲ್ಲಿ ಉರಿ ಉಂಟಾದ ಕಾರಣ ನಿಲಯದ ವಿದ್ಯಾರ್ಥಿನಿಯರು ತುಂಬಾ ಗಾಬರಿಗೊಂಡು ಭಯದಿಂದ ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ನಿಲಯದ ಹೊರಗೆ ಕುಳಿತು ಕೊಂಡಿದ್ದರು.

ಈ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ವಸತಿ ನಿಲಯದ ಅಡುಗೆ ಕೋಣೆಗೆ ದೌಡಾಯಿಸಿ ಅನಿಲ ಸಂಪರ್ಕದ ಬಳಿಯ ಸೊರಿಕೆಯನ್ನು ಪತ್ಯೆ ಹಚ್ಚಿ ಸ್ಥಳದಲ್ಲೇ ಇದ್ದ ನಾಲ್ಕು ತುಂಬಿದ ಸಿಲಿಂಡರ್ ಗಳನ್ನು ಹೊರಗೆ ಸಾಗಿಸಿ ದೊಡ್ಡ ಪ್ರಮಾಣದ ಅಪಾಯವನ್ನು ತಪ್ಪಿಸಿದರು.

ಈ ಘಟನೆ ಜರುಗಿದ ಕೆಲವು ಸಮಯ ವಸತಿ ನಿಲಯದ ಸುತ್ತ ಮುತ್ತಲಿನ ನಾಗರಿಕರು ಭಯ ಭೀತರಾದರು.

ಈ ವಿಷಯ ತಿಳಿದು ವಸತಿ ನಿಲಯಕ್ಕೆ ಆಗಮಿಸಿದ ನಗರಸಭೆ ಸದಸ್ಯ ಅರುಣ ಅಪ್ಪುಶೆಟ್ಟಿ ವಿದ್ಯಾರ್ಥಿನಿಯರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿವಸತಿ ನಿಲಯದ ಮುಖ್ಯ ಮೇಲ್ವಿಚಾರಕಿ ನಾಗರತ್ನಮ್ಮ, ಸಹಾಯಕ ಮೇಲ್ವಿಚಾರಕಿ ಶಾರದಾ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಕೃಷ್ಣಾಜೀ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT