ಗವಿಸಿದ್ಧೇಶ್ವರ ಜಾತ್ರೆಗೆ ಭರದ ಸಿದ್ಧತೆ

7
ಮಾದ್ಯಮ ಕೇಂದ್ರಕ್ಕೆ ಚಾಲನೆ: ವಿವಿಧ ಗ್ರಾಮದ ಭಕ್ತರ ಮೆರವಣಿಗೆ

ಗವಿಸಿದ್ಧೇಶ್ವರ ಜಾತ್ರೆಗೆ ಭರದ ಸಿದ್ಧತೆ

Published:
Updated:
Prajavani

ಕೊಪ್ಪಳ: ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಾಧ್ಯಮ ಕೇಂದ್ರಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಥಮ ದರ್ಜೆ ಸಹಾಯಕ ಎಂ.ಅವಿನಾಶ ಬುಧವಾರ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಅವರು, ಪತ್ರಕರ್ತರಿಗೆ ಅವಶ್ಯವಿರುವ ಸುದ್ದಿ ಮತ್ತು ತಕ್ಷಣಕ್ಕೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಕೇಂದ್ರದಲ್ಲಿ ಮಾಡಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ವಿಜ್ಞಾನ ಸೂಚನಾ ಕೇಂದ್ರ (ಎನ್‌ಐಸಿ) ಅಧಿಕಾರಿ ಈರಣ್ಣ ಏಳುಬಾವಿ ಮಾತನಾಡಿ, ಅಂತರ್ಜಾಲದ ವೇಗ ಹಾಗೂ ಗುಣಮಟ್ಟದ ದೃಷ್ಟಿಯಿಂದ ಪ್ರಮುಖ ಅಂತರ್ಜಾಲ ಸೇವೆ ನೀಡುವ ಕಂಪೆನಿಗಳೊಂದಿಗೆ ಮಾತನಾಡಿ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಟ್ರಸ್ಟ್ ಸದಸ್ಯ ಸಂಜಯ ಕೊತಬಾಳ, ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಮಹೇಶ ಮುದುಗಲ್, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್, ಎಸ್‌.ಎಂ.ಕಂಬಾಳಿಮಠ, ಪ್ರಕಾಶ ಬಳ್ಳಾರಿ, ನಾಗರಾಜ ದಂಡೋತಿ ಭಾಗವಹಿಸಿದ್ದರು.

ಜ.22ರಿಂದ ಮೂರು ದಿನಕಾಲ ಮಾಧ್ಯಮ ಕೇಂದ್ರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರಾಚಾರ್ಯ ಮನೋಹರ ದಾದ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಸೊಪ್ಪಿಮಠ ನಿರೂಪಿಸಿದರು. ಪರೀಕ್ಷಿತರಾಜ ನಿರೂಪಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರು: ಕೃಪಾದೃಷ್ಟಿ ಜಾಥಾ ನಿಮಿತ್ತ 'ಅಂಧತ್ವಕ್ಕೆ ಕಾರಣ ಮತ್ತು ಪರಿಹಾರೋಪಾಯಗಳು' ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗ- ಹನುಮೇಶ ಮ್ಯಾಗಡಿ ಕನಕಗಿರಿ (ಪ್ರಥಮ), ವೃಷಿಕಾ ದೇವಿ ರಾಜೂರ (ದ್ವಿತೀಯ), ಪದವಿ ಪೂರ್ವ ಕಾಲೇಜು ವಿಭಾಗ- ವೆಂಕಟೇಶ ಫಕೀರಪ್ಪ (ಪ್ರಥಮ), ಅಲಿಯಾ ನಾಜ್‍ಮಿನ್ (ದ್ವಿತೀಯ), ಪದವಿ ಕಾಲೇಜು- ನಬಿಲಾ (ಪ್ರಥಮ),  ಶ್ರೀನಿವಾಸ ಈರಪ್ಪ (ದ್ವಿತೀಯ) ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ಜ.18ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜೇಶ ಯಾವಗಲ್, ಮಲ್ಲಿಕಾರ್ಜುನ ಹ್ಯಾಟಿ ತಿಳಿಸಿದ್ದಾರೆ.

ರೊಟ್ಟಿ ದಾನ: ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾದಾಸೋಹಕ್ಕೆ ಬುಧವಾರ ಹುಳ್ಕಿಹಾಳ ಗ್ರಾಮದ ಭಕ್ತರು 10 ಸಾವಿರ ರೊಟ್ಟಿ, ದವಸ ಧಾನ್ಯ, ಹಿರೇಮನ್ನಾಪುರ ಗ್ರಾಮದ ಭಕ್ತರಿಂದ 1001 ರೊಟ್ಟಿ, 2 ಪ್ಯಾಕೇಟ್ ಈರುಳ್ಳಿ, 2 ಪಾಕೇಟ್ ಸಜ್ಜಿ, ಹಂಚಿನಾಳ ಗ್ರಾಮದ ಭಕ್ತರಿಂದ 1 ಪ್ಯಾಕೇಟ್ ಸಜ್ಜೆ, 1 ಪ್ಯಾಕೆಟ್ ತೊಗರಿ, 1 ಪ್ಯಾಕೇಟ್ ಜೋಳ ಹಾಗೂ 1000 ರೊಟ್ಟಿ, ಮಾಟರಂಗಿ ಗ್ರಾಮದ ಭಕ್ತರಿಂದ 1000 ರೊಟ್ಟಿಗಳು, ಹುಲಸಗೇರಿ ಗ್ರಾಮದ ಭಕ್ತರಿಂದ 2000 ರೊಟ್ಟಿಗಳು ಮಹಾದಾಸೋಹಕ್ಕೆ ಅರ್ಪಣೆಯಾದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !