ಮುನಿರಾಬಾದ್: ಸಮೀಪದ ಅಗಳಕೇರಾ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಈಚೆಗೆ ನಡೆಯಿತು.
ಎರಡನೆಯ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿತ್ತು.
ಯಂಕವ್ವ ಕನಕರಾಜ ಬುಳ್ಳಾಪುರ (ಅಧ್ಯಕ್ಷೆ), ಪ್ರಭಾವತಿ ಜಂಬಣ್ಣ ಹೂಗಾರ (ಉಪಾಧ್ಯಕ್ಷೆ) ಅವಿರೋಧವಾಗಿ ಆಯ್ಕೆಯಾದರು. ನೋಡಲ್ ಅಧಿಕಾರಿ ಶರಣು ಪೂಜಾರ ಆಯ್ಕೆಯನ್ನು ಘೋಷಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಅನಿತಾ, ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು. ಆಯ್ಕೆಯಾದ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಸಂಘ ಸಂಸ್ಥೆಯ ಪದಾಧಿಕಾರಿಗಳು ಸನ್ಮಾನಿಸಿದರು.