ಭಾನುವಾರ, ಸೆಪ್ಟೆಂಬರ್ 19, 2021
28 °C

ಪಂಚಾಯಿತಿ ಕಾರ್ಯ ತರಬೇತಿ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಅಳವಂಡಿ: ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಸಿಬ್ಬಂದಿಗೆ ಗ್ರಾಮ ಪಂಚಾಯಿತಿಯ ಆಡಳಿತಾತ್ಮಕ ವಿಷಯಗಳ ಕುರಿತು ಈಚೆಗೆ ಯುಟ್ಯೂಬ್ ಮೂಲಕ ತರಬೇತಿ ಕಾರ್ಯಾಗಾರ ನಡೆಯಿತು.

ಗ್ರಾಮ ಪಂಚಾಯಿತಿಗಳ ದೂರದೃಷ್ಟಿ ಯೋಜನೆ, ಮಹಿಳಾ ಮತ್ತು ಮಕ್ಕಳ ಉದ್ದೇಶಿತ ಆಯವ್ಯಯ ತಯಾರಿಕೆ ಕುರಿತು, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ, ಪಶು ಚಿಕಿತ್ಸಾಲಯ ಕೇಂದ್ರಗಳ ಬಲಪಡಿಸುವ ಬಗ್ಗೆ, ಅಂಗನವಾಡಿ, ಶಾಲೆ ಬಲಪಡಿಸುವ ಕುರಿತು, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಪರಿವೀಕ್ಷಣೆ ಹಾಗೂ ಇತರರ ವಿಷಯಗಳ ಕುರಿತು ಎಲ್ಲರಿಗೂ ಯುಟ್ಯೂಬ್‌ ಮೂಲಕ ತರಬೇತಿ ನೀಡಲಾಯಿತು.

ಅಧ್ಯಕ್ಷ ಭಾರತಿ ಬೆಣಕಲ್, ಉಪಾಧ್ಯಕ್ಷ ಶಂಕ್ರಮ್ಮ‌ ಜೋಗಿನ, ಮುಖಂಡರಾದ ತೋಟಯ್ಯ ಅರಳೆಮಠ, ವಿಶ್ವನಾಥ ದೋತರಗಾವಿ, ಹನುಮಂತ ಮೂಲಿಮನಿ,ಗುರು ದಾಸರಡ್ಡಿ, ಅನ್ವರ್ ಗಡಾದ, ಪ್ರಕಾಶ್ ಇಳಗೇರಾ, ನಜೀರ್ ತೋಟಗಾರ, ಮಲ್ಲಪ್ಪ ಬೆಣಕಲ್, ಹನುಮಪ್ಪ ಜೋಗಿನ, ದೇವೆಂದ್ರರಡ್ಡಿ, ಶಿವಮೂರ್ತಿ, ಏಕಯ್ಯ, ಶೇಖರ್, ಹನುಮಂತ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.