ಶಶಿಕಲಾ ಅವರು ಪ್ರಗತಿ ಸಂಜೀವಿನಿ ಮಹಿಳಾ ಒಕ್ಕೂಟದ ಶ್ರೀ ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯಾಗಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಪಿಎಂಇಜಿಪಿಯಲ್ಲಿ ಅರ್ಜಿ ಸಲ್ಲಿಸಿ, ಸಾಲ ಪಡೆದು ಹಿಟ್ಟಿನ ಗಿರಣಿ, ಶುದ್ಧ ಕುಡಿಯುವ ನೀರಿನ ಘಟಕ, ಜೆರಾಕ್ಸ್ ಸೆಂಟರ್, ಕಿರಾಣಿ ಸ್ಟೋರ್ ಹಾಗೂ ಕಂಟಿಗ್ ಶಾಪ್ ಉದ್ಯೋಗ ಮಾಡಿ, ಉತ್ತಮ ಆದಾಯ ಗಳಿಕೆ ಮಾಡುತ್ತಿದ್ದಾರೆ.