ಕುಕನೂರು: ಪಟ್ಟಣದ ಜವಳದ ಕಾಲೋನಿಯಲ್ಲಿ ಮಳೆಗಾಗಿ ಗುರ್ಜಿ ಪೂಜೆ ಮಾಡಿ ಪ್ರಾರ್ಥಿಸಲಾಯಿತು.

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತಾಲ್ಲೂಕಿನ ರೈತರು ಪರಿತಪಿಸುವಂತಾಗಿದೆ. ಬೇಗನೇ ಬಾರೋ ಮಳೆರಾಯ ಎಂದು ಹಲವು ಆಚರಣೆಗಳ ಮೂಲಕ ರೈತರು ಪೂಜೆ ಸಲ್ಲಿಸುತ್ತಿದ್ದಾರೆ. ಅದರಂತೆ, ಪಟ್ಟಣದ ಜವಳದ ಕಾಲೋನಿಯಲ್ಲಿ ಮಹಿಳೆಯರು ಗುರ್ಜಿ ಪೂಜಿಸಿ ಮಳೆರಾಯನನ್ನು ಆಹ್ವಾನಿಸಿದರು.

ಜೋಳದ ರೊಟ್ಟಿ ಬೇಯಿಸುವ ಹಂಚಿನ ಮೇಲೆ ಸೆಗಣಿಯಿಂದ ತಯಾರಿಸಿದ ಗುರ್ಜಿಯನ್ನು ಒಬ್ಬ ಯುವಕನ ತಲೆ ಮೇಲೆ ಇಟ್ಟು ಮನೆ ಮನೆಗೆ ಹೋಗಿ ‘ಗುರ್ಜಿ ಗುರ್ಜಿ ಎಲ್ಲಾಡಿ ಬಂದೆ. ಹಳ್ಳಕೊಳ್ಳ ಸುತ್ತಾಡಿ ಬಂದೆ. ಕಾರ ಮಳೆಯೋ ಕಪ್ಪತ್ತ ಮಳೆಯೋ. ಸುರಿ ಸುರಿ ಸುರಿಯೋ ಮಳೆರಾಯ, ಬಣ್ಣ ಕೊಡ್ತೇನಿ ಬಾರಲೇ ಮಳೆಯೇ, ಸುಣ್ಣ ಕೊಡ್ತೇನಿ ಸುರಿಯಲೇ ಮಳೆಯೇ’ ಎಂದು ಮಹಿಳೆಯರು ಹಾಡುತ್ತಿರುವ ದೃಶ್ಯ ಕಂಡುಬಂತು.

ಶಿವಪುರ್ತಪ್ಪ ಕಲಾದಗಿ, ರವಿ ಮಡಿವಾಳರ, ಜಯಲಕ್ಸ್ಮಿ ಬಿನ್ನಾಳ, ರಜಿಯಾ ಬೇಗಂ, ಮಂಜುಳಾ. ಕವಿತಾ, ಶ್ಯಾಂತವ್ವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.