ಶುಕ್ರವಾರ, ಫೆಬ್ರವರಿ 28, 2020
19 °C
ಹೇಳಿಕೆ

ಹಾಲಪ್ಪ ನಮ್ಮ ಪ್ರೊಡಕ್ಟ್: ಬಸವರಾಜ ರಾಯರಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕೊಪ್ಪಳ: 'ಶಾಸಕ ಹಾಲಪ್ಪ ಆಚಾರ ಸಚಿವರಾದರೆ ನಮಗೆ ಸಂತೋಷ. ಅದು ಕೂಡಾ ನಮ್ಮದೇ ಪ್ರೊಡಕ್ಟ್' ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

 ಯಲಬುರ್ಗಾದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷ್ಣಾ ‘ಬಿ’ ಸ್ಕೀಂ ವಸ್ತುಸ್ಥಿತಿ ಹಾಗೂ ಸತ್ಯಾಂಶ ಕುರಿತ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

'ಹಾಲಪ್ಪನಂತವರನ್ನು ನಾವು ತಯಾರು ಮಾಡಿದ್ದೇವೆ. ನಾಯಕರನ್ನು ತಯಾರು ಮಾಡಿದ ಪಕ್ಷ ನಮ್ಮ ಕಾಂಗ್ರೆಸ್. ಆದರೆ, ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಆತನ ಬಗ್ಗೆ ನನಗೆ ದ್ವೇಷವಿಲ್ಲ. ರಾಜಕಾರಣ ಮಾಡುವುದನ್ನು ನಮ್ಮಿಂದಲೇ ಕಲಿತಿದ್ದಾನೆ. 'ಮಂತ್ರಿ ಭಾಗ್ಯ' ಯಲಬುರ್ಗಾಕ್ಕೆ ಹೀಗೆ ಸಂಪ್ರದಾಯವಾಗಲಿ' ಎಂದು ಮಾರ್ಮಿಕವಾಗಿ ಹೇಳಿದರು.

ಬಿಜೆಪಿಯವರಿಗೆ ಸಮರ್ಥರನ್ನು ತಯಾರು ಮಾಡಲು ಆಗುವುದಿಲ್ಲ. ಹೀಗಾಗಿ ನಮ್ಮದೇ ಉತ್ಪನ್ನಗಳನ್ನು ಬಳಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬರೀ ಮಾತನಾಡುತ್ತಾರೆ. ಕೆಲಸ ಮಾಡುವುದಿಲ್ಲ. ಸಿದ್ದರಾಮಯ್ಯ ಮಾಡಿದ ಕೆಲಸಗಳನ್ನು ಇವರು ಮಾಡಲಿ ಎಂದು ಸಲಹೆ ನೀಡುತ್ತಿದ್ದೇನೆ ಎಂದರು.

ಶಾಸಕ ಹಾಲಪ್ಪ ಆಚಾರ ಅವರಿಗೆ ಸಚಿವ ಸ್ಥಾನ ದೊರೆಯುವುದು ಖಚಿತ ಎನ್ನಲಾಗುತ್ತಿದೆ. ಹಿಂದುಳಿದ ಈ ಭಾಗದಲ್ಲಿ ಪ್ರಾತಿನಿಧ್ಯ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ನಮ್ಮನ್ನು ನಾವು ಯಾರಿಗೂ ಹೋಲಿಸಿಕೊಳ್ಳುವುದಿಲ್ಲ. ನಮಗೆ ನಾವೇ ಸಾಟಿ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)