ಹನಮಸಾಗರ: ಪಟ್ಟಣದಲ್ಲಿ ಮಾದಿಗ ಸಮಾಜ ಹಾಗೂ ಜೈ ಭೀಮ ಯುವಕ ಸಂಘದ ಸಹಯೋಗದಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.

ಪಟ್ಟಣದ ಬೀದಿಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಡಾ.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ನೂರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದರು.

ಭಾಷಣಕಾರ ಶರಣು ತಮ್ಮಿನಾಳ ಮಾತನಾಡಿ, ‘ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ಎಲ್ಲರ ಸೂರ್ಯ. ಅವರ ಕ್ರಾಂತಿಕಾರಿ ಪರಿವರ್ತನೆಗಳನ್ನು ಅಳವಡಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ವೈಚಾರಿಕ ಚಿಂತನೆಯ ನೆಲೆಗಟ್ಟಿನ ಮೇಲೆ ಬದುಕು ನಡೆಸಬೇಕು. ಮೌಢ್ಯ ಮತ್ತು ಅನಾಚಾರಗಳಿಂದ ಹೊರಬರಬೇಕು. ದಲಿತರ ಉದ್ಧಾರ ಕೇವಲ ಭಾಷಣಗಳಲ್ಲಿಲ್ಲ. ಮೇಲ್ವರ್ಗಕ್ಕೆ ಇಲ್ಲದ ದೇವದಾಸಿ ಪದ್ಧತಿ ನಮ್ಮ ವರ್ಗಕ್ಕೆ ಏಕೆ? ಮೌಢ್ಯದಿಂದ ಹೊರಬಂದರೆ ನಮ್ಮ ಮನೆಯಲ್ಲಿ ದಲಿತ ಸೂರ್ಯ ಪ್ರಕಾಶಿಸಲು ಸಾಧ್ಯ’ ಎಂದು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ಮಾತನಾಡಿ, ‘ಅಂಬೇಡ್ಕರ್ ಎಂದರೆ ಕೇವಲ ಮೀಸಲಾತಿಯಲ್ಲ. ಅಂಬೇಡ್ಕರ್ ಎಂದರೆ ಶಿಕ್ಷಣ. ಶಿಕ್ಷಣ ಎಂದರೆ ಹುಲಿಯ ಹಾಲು, ಅದನ್ನು ಕುಡಿದವರು ಗರ್ಜಿಸಲೇಬೇಕು. ನೀಲಿ ಶಾಲಿನ ಜತೆ ನೀಲಿ ಪೆನ್ನನ್ನು ಲೇಖನಿಯನ್ನಾಗಿ ಬಳಸುವ ಕಲೆ ಎಲ್ಲ ಸಮುದಾಯಕ್ಕೆ ಬರಬೇಕು. ಜಯಂತಿಗೆ ಸೀಮಿತಗೊಳಿಸದೆ, ಅವರ ಶಿಕ್ಷಣ, ಸಂಘಟನೆ, ಹೋರಾಟದ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗಬೇಕು’ ಎಂದು ಹೇಳಿದರು.

ಶಿಕ್ಷಕ ಶರಣಪ್ಪ ವಡ್ಡರ ಪ್ರಸ್ತಾವಿಕವಾಗಿ ಮಾತನಾಡಿ, ‘ಅಂಬೇಡ್ಕರ್ ಶೋಷಿತ ಸಮುದಾಯದ ಹರಿಕಾರ. ಅವರ ಹೋರಾಟದಿಂದಾಗಿ ನಾವು ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ. ದುಡಿದ ಹಣವನ್ನು ಆಹಾರ ಮತ್ತು ಪುಸ್ತಕಗಳನ್ನು ಓದಲು ಬಳಸಬೇಕು. ಭಾರತದ ಸಂವಿಧಾನವು ಧರ್ಮವನ್ನು ಅಂಗೀಕರಿಸದೆ, ಎಲ್ಲರಿಗೂ ಸಮಾನತೆಯನ್ನು ನೀಡಿದೆ’ ಎಂದು ತಿಳಿಸಿದರು.

ನೀಲಕಂಠಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ಸಮಾಜದ ಹಿರಿಯ ಶಿವರಾಜ ಹುಲ್ಲೂರು, ಮೈನುದ್ದೀನ್ ಖಾಜಿ, ಚಂದ್ರು ಹಿರೇಮನಿ, ದೇವಪ್ಪ ತೆಂಗುಂಟಿ, ನಾಗರಾಜ ಕಂದಗಲ, ಗುರುರಾಜ, ಶೇಖಪ್ಪ, ಹುಲಗಪ್ಪ ವಡ್ಡರ, ಯಮನೂರ, ನೀಲಪ್ಪ ಕುದರಿ, ಹನಮಪ್ಪ ಗುಡಿಮನಿ, ದ್ಯಾಮಪ್ಪ ಕಟ್ಟಿಮನಿ, ಮರಿಯಪ್ಪ ಕಡೆಮನಿ, ಚಂದಪ್ಪ ಕುದರಿ, ಬಾಳಪ್ಪ ಹಿರೇಮನಿ, ದುರಗಪ್ಪ ಅಂತರಗಂಗಿ, ಸೋಮಪ್ಪ ಹೊಸಮನಿ, ಯಮನಪ್ಪ ಪೂಜಾರ, ರಜತಪ್ಪ ಸಂಧಿಮನಿ, ದುರಗಪ್ಪ ಇಲಕಲ್, ಹಾಗೂ ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ಆಸೀಫ್ ಡಲಾಯತ, ಚಂದಪ್ಪ, ಸೋಮಪ್ಪ, ಮಂಜುನಾಥ ಹುಲ್ಲೂರು, ಹುಲಗಪ್ಪ, ಶರಣಪ್ಪ ಸೇರಿದಂತೆ ಅನೇಕ ಗಣ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-35-1164234062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.