ಹನುಮಸಾಗರ: ಬಿರು ಬೇಸಿಗೆಯಲ್ಲೂ ಮಣ್ಣಿನ ಮಡಕೆಗಳಿಗೆ ಬೇಡಿಕೆ ಕುಸಿಯುತ್ತಿರುವುದು ಕುಂಬಾರ ಸಮುದಾಯದ ಬದುಕನ್ನು ದುಸ್ತರಗೊಳಿಸಿದೆ. ಆಧುನಿಕ ತಂತ್ರಜ್ಞಾನದ ಫ್ರೀಜರ್ ಗಳ ಬಳಕೆಯಿಂದಾಗಿ ಜನರು ಮಣ್ಣಿನ ಮಡಕೆಗಳಿಂದ ದೂರ ಸರಿಯುತ್ತಿದ್ದು, ಇದು ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿಯನ್ನು ನಂಬಿರುವವರ ಜೀವನೋಪಾಯಕ್ಕೆ ದೊಡ್ಡ ಹೊಡೆತ ನೀಡಿದೆ.

ಇಲ್ಲಿಯ ಸೋಮವಾರದ ಸಂತೆಯಲ್ಲಿ ಮಣ್ಣಿನ ಮಡಕೆಗಳನ್ನು ಮಾರಾಟಕ್ಕಿಟ್ಟಿದ್ದ ಶಾಂತವ್ವ ಕುಂಬಾರ ಅವರು ಈ ಕುರಿತು ತಮ್ಮ ಅಳಲು ತೋಡಿಕೊಂಡರು. ‘ಒಂದು ಮಣ್ಣಿನ ಮಡಕೆಯೂ ಮಾರಾಟವಾಗದೆ ಇರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ’ ಎಂದರು.

ಮಲ್ಲಪ್ಪ ಕುಂಬಾರ ಅವರ ಪ್ರಕಾರ, ‘ಒಂದು ನೀರಿನ ಮಡಕೆಗೆ ₹ 200 ರಿಂದ 250 ಬೆಲೆ ಇದೆ. ಆದರೂ ಕೂಡ ಯಾರೂ ಇದನ್ನು ಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ’ ಎಂದು ದುಃಖ ವ್ಯಕ್ತಪಡಿಸಿದರು.

ಬಾದಾಮಿಯಿಂದ ಮಣ್ಣಿನ ಮಡಕೆಗಳು ಮತ್ತು ಮಣ್ಣಿನ ಒಲೆಗಳನ್ನು ತಂದು ₹ 20-30 ಲಾಭಕ್ಕಾಗಿ ಮಾರಾಟ ಮಾಡುವ ಮಂಗಳಾ ಕುಂಬಾರ ಅವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ‘ದಿನದಲ್ಲಿ ಒಂದು ಮಡಕೆಯೂ ಮಾರಾಟವಾಗದಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಕೆಲಸವನ್ನು ಮೆಚ್ಚಿಕೊಂಡಿರುವುದು ವ್ಯರ್ಥವಾಗುತ್ತಿದೆ’ ಎಂದು ನೋವಿನಿಂದ ನುಡಿದರು.

ಮಣ್ಣಿನ ಮಡಕೆಯ ನೀರು ನೈಸರ್ಗಿಕವಾಗಿ ತಂಪಾಗಿರುವುದಲ್ಲದೆ, ಖನಿಜಾಂಶಗಳನ್ನು ಉಳಿಸಿಕೊಂಡು ದೇಹಕ್ಕೆ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕುಂಬಾರ ಸಮುದಾಯದ ಬದುಕನ್ನು ಉಳಿಸಲು ಮತ್ತು ಸಾಂಪ್ರದಾಯಿಕ ಕರಕುಶಲತೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಬೇಕಿದೆ. ಮಣ್ಣಿನ ಮಡಕೆಗಳ ಬಳಕೆಯನ್ನು ಪುನರುಜ್ಜೀವನಗೊಳಿಸುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದರ ಜೊತೆಗೆ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಕುಂಬಾರಿಕೆ ವೃತ್ತಿಯನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರು ಆಶಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-35-57971154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.