ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮ ಜಯಂತಿ: ಕೊರೊನಾ ಮಾರಿ ನಾಶಕ್ಕೆ ಎಲೆ ಪೂಜೆ ಸೇವೆ

Last Updated 9 ಏಪ್ರಿಲ್ 2020, 8:58 IST
ಅಕ್ಷರ ಗಾತ್ರ

ಕೊಪ್ಪಳ: ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚಿ ಮನುಕುಲವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಕೊರೊನಾ ಎಂಬ ರೋಗ ಶೀಘ್ರವೇ ಅವನತಿ ಹೊಂದಲಿ, ಇದನ್ನು ಉದ್ದೇಶಪೂರ್ವಕವಾಗಿ ಹಬ್ಬಿಸುವ ಮನಃಸ್ಥಿತಿ ಉಳ್ಳವರಿಗೆ ಭಗವಂತ ಸದ್ಬುದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿತಾಲ್ಲೂಕಿನಅಗಳಕೇರಿ ಬಳಿಯ ಗುಡ್ಡದ ಮೇಲೆ ಇರುವ ಐತಿಹಾಸಿಕ ಅಂದಿಗಾಲೀಶ್ವರ (ಹನುಮ)ನಿಗೆಎಲೆ ಚೆಟ್ಟಿ ಸೇವೆ ಮಾಡಲಾಯಿತು.

ಶಹಾಪುರ ಗಿರೀಶ್ ಹಿರೇಮಠ ಮತ್ತು ವೀರಣ್ಣ ಕೋಮಲಾಪುರ ಕುಂಕುಮಾರ್ಚನೆ ನಡೆಸಿದರು.

ನಗರದ ವಿವಿಧ ಆಂಜನೇಯನ ದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ವಿಶೇಷ ಪೂಜೆ, ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಪುರಾಣ ಪ್ರಸಿದ್ಧ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ನಡೆಯಿತು. ಮೊದಲ ಬಾರಿಗೆ ಜನರಿಲ್ಲದೆ ಅಂಜನಾದ್ರಿ ಪರ್ವತ ಬಿಕೋ ಎನ್ನುತ್ತಿತ್ತು. ದೇವಸ್ಥಾನದ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಅರ್ಚಕರು ಹನುಮಾನ್ ಚಾಲೀಸಾ ಪಠಿಸಿ ಜಯಂತಿಯನ್ನು ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT