ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಬೇಸರ | ಮೂಲಸೌಲಭ್ಯಗಳನ್ನು ಒದಗಿಸಲು ಸಾರ್ವಜನಿಕರ ಆಗ್ರಹ | ಶೀಘ್ರ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಆರಂಭಕ್ಕೆ ಒತ್ತಾಯ
ಹನುಮಸಾಗರ ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆ ಎದ್ದು ಕಾಣುತ್ತಿರುವುದು.
ಕೆಲವೊಂದಿಷ್ಟು ಪ್ರಯಾಣಿಕರು ಹಾಸನದ ಮೇಲೆ ಕುಳಿತರೆ ಬಸ್ಸಿಗಾಗಿ ಕೆಲವೊಂದಿಷ್ಟು ಪ್ರಯಾಣಿಕರು ನಿಂತುಕೊಂಡಿರುವುದು.
ಬಿಸಿಲು ತಾಪಕ್ಕೆ ಮರದ ನೆರಳನ್ನು ಪಡೆದು ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು.

ಬಸ್ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ. ಕೆಕೆಆರ್‌ಡಿಬಿ ನಿಧಿ ಬಿಡುಗಡೆ ಆಗಿಲ್ಲ. ಹೀಗಾಗಿ ಕಾಮಗಾರಿ ತಡವಾಗುತ್ತಿದೆ. ಶೀಘ್ರ ಅಂದಾಜುಪಟ್ಟಿ ಸಿದ್ಧಪಡಿಸಿ ಬಸ್ ನಿಲ್ದಾಣವನ್ನು ಹೈಟೆಕ್ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ
ಕೆ.ಬಿ.ವೆಂಕಟೇಶ ಎಇಇ
ಹನುಮಸಾಗರ ಈಗ ಪಟ್ಟಣ ಪಂಚಾಯಿತಿ ಆಗಿದೆ. ಜನರ ಓಡಾಟ ಹೆಚ್ಚಾಗಿದೆ. ಆದರೂ ಬಸ್ ನಿಲ್ದಾಣದ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಮತಕ್ಕಾಗಿ ಬರುವ ಜನಪ್ರತಿನಿಧಿಗಳು ಜನರ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದಿಲ್ಲ. ಶಾಸಕರು ಗಂಭೀರವಾಗಿ ಪರಿಗಣಿಸಬೇಕಿದೆ
ಹೆಸರು ಹೇಳಲಿಚ್ಛಿಸದ ಪ್ರಯಾಣಿಕ
ಬೇಸಿಗೆಯಲ್ಲಿ ಬಿಸಿಲು ತಾಳಲಾಗದು. ಬಸ್ ಬರುವವರೆಗೂ ನಿಲ್ಲಲು ನೆರಳೂ ಇಲ್ಲ. ಕುಳಿತುಕೊಳ್ಳಲು ಆಸನವೂ ಇಲ್ಲ. ನಾವು ಮರಗಳ ನೆರಳಿನಲ್ಲಿ ನಿಂತುಕೊಂಡು ಬಸ್ ಕಾಯಬೇಕಾಗುತ್ತದೆ. ಹೊಸ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಬೇಕು
ಚಿರಂಜೀವಿ ಕಾಲೇಜು ವಿದ್ಯಾರ್ಥಿ