ಹನುಮಸಾಗರ: ಜೂನ್ ಆರಂಭವಾದರೂ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿಲ್ಲ. ಹೀಗಾಗಿ ರೈತರು ಬಿತ್ತನೆ ಕಾರ್ಯ ಆರಂಭಿಸಲು ಕಾಯುವಂತಾಗಿದೆ. ಕೆಲವು ದಿನಗಳಿಂದ ತೀವ್ರ ಬೇಸಿಗೆಯಿಂದ ಬಳಲಿದ್ದ ಜನರಿಗೆ ಬುಧವಾರ ಮಧ್ಯಾಹ್ನ ಸುರಿದ ಗುಡುಗು-ಮಿಂಚು ಸಹಿತ ಮಳೆ ತುಸು ನೆಮ್ಮದಿ ನೀಡಿದೆ.

ಹನುಮಸಾಗರ ಹಾಗೂ ಸುತ್ತಲಿನ ಕಬ್ಬರಗಿ, ಹನುಮನಾಳ, ನಿಲೋಗಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದೆ. ಇದರಿಂದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ. ಮಳೆ ಬಿದ್ದ ತಕ್ಷಣ ಹಲವೆಡೆ ರೈತರು ಜಮೀನು ಉಳುಮೆ ಹಾಗೂ ಬಿತ್ತನೆ ಪೂರ್ವ ಸಿದ್ಧತಾ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ.

ಸಾಮಾನ್ಯವಾಗಿ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಚುರುಕುಗೊಳ್ಳುವುದರಿಂದ ರೈತರು ಜೋಳ, ಸಜ್ಜೆ, ತೊಗರಿ, ಹತ್ತಿ ಹಾಗೂ ಇತರ ಬೆಳೆಗಳ ಬಿತ್ತನೆ ಕಾರ್ಯ ಆರಂಭಿಸುತ್ತಾರೆ. ಆದರೆ ಈ ಬಾರಿ ಮುಂಗಾರು ಆಗಮನದಲ್ಲಿ ವಿಳಂಬವಾಗಿರುವುದರಿಂದ ಅನೇಕ ರೈತರು ಬಿತ್ತನೆ ಮುಂದೂಡಿದ್ದಾರೆ. ಸಮರ್ಪಕ ಮಳೆಯಿಲ್ಲದೆ ಬಿತ್ತನೆ ಮಾಡಿದರೆ ಬೀಜ ಮೊಳಕೆಯ ಸಮಸ್ಯೆ ಉಂಟಾಗುವ ಆತಂಕ ರೈತರಲ್ಲಿದೆ.

ಇನ್ನೊಂದೆಡೆ ಕೆಲ ರೈತರು ಮೊದಲ ಮಳೆಯನ್ನು ಬಳಸಿ ಬಿತ್ತನೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ನಿರಂತರ ಮಳೆಯಾದರೆ ಬಿತ್ತನೆ ಕಾರ್ಯ ಮತ್ತಷ್ಟು ವೇಗ ಪಡೆ ಯುವ ನಿರೀಕ್ಷೆಯಿದೆ. ಕೃಷಿ ಇಲಾಖೆಯು ಸಹ ರೈತರು ಹವಾಮಾನ ಮುನ್ಸೂಚನೆ ಗಮನಿಸಿ ಸೂಕ್ತ ಸಮಯ ದಲ್ಲಿ ಬಿತ್ತನೆ ಕೈಗೊಳ್ಳುವಂತೆ ಸಲಹೆ ನೀಡಿದೆ. ಮಳೆ ತಡವಾದ ಕಾರಣ ಕೃಷಿ ಚಟುವಟಿಕೆಗಳಲ್ಲಿ ಸ್ವಲ್ಪ ಹಿನ್ನೆಡೆ ಕಂಡುಬಂದಿದ್ದರೂ, ಬುಧವಾರ ಸುರಿದ ಮಳೆ ರೈತರಲ್ಲಿ ಹೊಸ ಉತ್ಸಾಹ ತುಂಬಿದ್ದು, ಮುಂಗಾರು ಮಳೆಯ ನಿರೀಕ್ಷೆಯಲ್ಲಿ ರೈತ ಸಮುದಾಯ ಕಾದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-35-718370085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.