ಹನುಮಸಾಗರ: ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಮಾತನಾಡಿ, ‘ಗಣತಿದಾರರು ಮನೆಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ಸಮಗ್ರ ಹಾಗೂ ನಿಖರ ಮಾಹಿತಿಯನ್ನು ಒದಗಿಸಬೇಕು’ ಎಂದರು.

ಗಣತಿದಾರರು ಜನಗಣತಿ ಕಾರ್ಯವನ್ನು ಕ್ರಮಬದ್ಧ ಹಾಗೂ ಶಿಸ್ತಿನಿಂದ ಮಾಡಬೇಕು. ಗಣತಿ ಕಾರ್ಯ ಆರಂಭಿಸುವಾಗ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಮೂಲ ರಸ್ತೆಯಿಂದಲೇ ಕಾರ್ಯ ಆರಂಭಿಸಬೇಕು. ಪ್ರತಿ ಮನೆ ಹಾಗೂ ಪ್ರಮುಖ ಗುರುತುಗಳನ್ನು ಸ್ಪಷ್ಟವಾಗಿ ದಾಖಲಿಸುವುದು ಕಡ್ಡಾಯ’ ಎಂದರು.

ಮೇಲ್ವಿಚಾರಕ ಕಿಶನರಾವ್ ಕುಲಕರ್ಣಿ ಮಾತನಾಡಿ, ‘ಆರಂಭದ ಮೂರು ದಿನ ಮ್ಯಾಪಿಂಗ್ ಪ್ರಕ್ರಿಯೆ ನಡೆಯಲಿದೆ. ನಂತರ ಮನೆಮನೆಗೆ ತೆರಳಿ ಗಣತಿ ಕಾರ್ಯ ಕೈಗೊಳ್ಳಲಾಗುವುದು’ ಎಂದರು.

ಮೇಲ್ವಿಚಾರಕ ರಾಮಚಂದ್ರ ಬಡಿಗೇರ, ಹಬೀಬಪಾಶಾ ಮಕಾಂದಾರ, ಹುಲಗಪ್ಪ ಕೊಪ್ಪಳ, ಚಂದ್ರಶೇಖರ ಗುಳೆದ, ಮಹಾಂತಯ್ಯ ಕೊಮಾರಿ, ವೀರೇಶ ಕುರನಾಳ, ಹನುಮೇಶ ಪತ್ತಾರ, ಬಸವರಾಜ ಶಿವಸಿಂಪಿ, ಚಂದಯ್ಯ ಹಿರೇಮಠ, ಮಹಿಬೂಬ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-35-1887391846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.