ಹನುಮಸಾಗರ: ಇಲ್ಲಿಗೆ ಸಮೀಪದ ಕಾಟಾಪುರ, ಕಬ್ಬರಗಿ, ಹೂಲಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದ ರೈತರಿಗೆ ಮಾರುಕಟ್ಟೆಯಲ್ಲಿನ ಬೆಲೆ ಕುಸಿತವು ದೊಡ್ಡ ಆಘಾತ ನೀಡಿದೆ. ಉತ್ತಮ ಆದಾಯದ ಕನಸು ಕಂಡಿದ್ದ ರೈತರು, ಬ್ಯಾಂಕ್ ಮತ್ತು ಖಾಸಗಿ ಸಾಲ ಮಾಡಿ ಬೀಜ, ರಸಗೊಬ್ಬರ, ಔಷಧ ಮತ್ತು ಕೂಲಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಭಾರಿ ಕುಸಿತ ಕಂಡಿರುವುದರಿಂದ ಬೆಳೆಗಾರರ ಬದುಕು ಅತಂತ್ರವಾಗಿದೆ.

ಕಾಟಾಪುರ ಗ್ರಾಮದ ರೈತ ನಾಗೇಶ ಗಂಗಾಧರ್ ಬಡಿಗೇರ, ‘1 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, ಬೀಜ, ರಾಸಾಯನಿಕ ಗೊಬ್ಬರ, ದನದ ಗೊಬ್ಬರ, ಬಾಡಿಗೆ ಕೂಲಿ ಕೆಲಸ ಸೇರಿದಂತೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇನೆ. ಆದರೆ ಇಳಕಲ್ ಮಾರುಕಟ್ಟೆಯಲ್ಲಿ 1 ಕೆಜಿ ಈರುಳ್ಳಿಗೆ ಕೇವಲ ₹8 ಬೆಲೆ ಸಿಗುತ್ತಿದ್ದು, 1 ಕ್ವಿಂಟಲ್ಗೆ 800 ರೂಪಾಯಿ ಮಾತ್ರ ದೊರೆಯುತ್ತಿದೆ. ರೈತರು ಕನಿಷ್ಠ ಕೆಜಿಗೆ 15-25 ರೂಪಾಯಿ ಬೆಲೆಯನ್ನು ನಿರೀಕ್ಷಿಸುತ್ತಿದ್ದರು. 6 ತಿಂಗಳಿಗೊಮ್ಮೆ ಬರುವ ಈ ಬೆಳೆಯಲ್ಲಿ ಭಾರಿ ನಷ್ಟ ಅನುಭವಿಸುವಂತಾಗಿದೆ’ ಎಂದು ಅಳಲು ತೋಡಿಕೊಂಡರು. ಇವರಂತೆ ಹಲವಾರು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡದೆ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಕೆಲ ರೈತರು ನಷ್ಟದ ನಡುವೆಯೇ ಈರುಳ್ಳಿಯನ್ನು ರಸ್ತೆ ಬದಿಯಲ್ಲಿ ಮತ್ತು ಹೊಲದಲ್ಲಿ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀಲಪ್ಪ ಮಾಲಿಪಾಟೀಲ ಅವರು, ‘ಹೊಸದಾಗಿ ಕೊಳವೆಬಾವಿ ಕೊರೆಸಿದ್ದು 1 ಎಕರೆ 25 ಗುಂಟೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ₹70 ಸಾವಿರದಿಂದ ₹80 ಸಾವಿರ ಖರ್ಚು ಮಾಡಿದ್ದೇನೆ. ಕ್ವಿಂಟಲ್ಗೆ ₹2500- ₹3000 ಬೆಲೆ ಸಿಗುವ ನಿರೀಕ್ಷೆಯಿತ್ತು. ಆದರೆ ಈಗ ಬೆಲೆ ಇಲ್ಲದೆ 100 ಕ್ವಿಂಟಲ್ಗೂ ಅಧಿಕ ಈರುಳ್ಳಿ ಹಾಗೆಯೇ ಉಳಿದಿದೆ. ಶಿವಪ್ಪ ಸಿದ್ದಪ್ಪ ಕಿರಸೂರ ಅವರಂತಹ ಅನೇಕ ರೈತರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬೆಲೆ ಸ್ಥಿರತೆ ಇಲ್ಲದ ಕಾರಣ ರೈತರ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ’ ಎಂದು ಬೇಸರಿಸಿದರು.

‘ಈರುಳ್ಳಿ ಬೆಳೆಗಾರರ ಈ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಉತ್ತಮ ಬೆಳೆ ಬಂದರೂ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ರೈತರಿಗೆ ಸೂಕ್ತ ಪರಿಹಾರ ನೀಡಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರು ಇಂತಹ ಬೆಳೆಗಳನ್ನು ಬೆಳೆಯಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಇದರಿಂದ ಇದು ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರಬಹುದು’ ಎಂದು ರೈತರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.