ಹನುಮಸಾಗರ: ಪಟ್ಟಣದ ಅಂಬಾಭವಾನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ಯುವಜನರಲ್ಲಿ ಸಂಸ್ಕಾರ ಜವಾಬ್ದಾರಿ ಹಾಗೂ ಸಾಮಾಜಿಕ ಜಾಗೃತಿ ಬೆಳೆಸುವ ಉದ್ದೇಶದಿಂದ ಎಸ್.ಎಸ್.ಕೆ. ಸಮಾಜ ಟ್ರಸ್ಟ್ ವತಿಯಿಂದ ಜಾಗೃತವೇ ನಮ್ಮ ಸಮಾಜದ ರಕ್ಷಣೆ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಉಪನ್ಯಾಸಕ ಹನಮಂತಸಾ ನಿರಂಜನ ಮಾತನಾಡಿ, ‘ಯುವಜನತೆ ಹಾಗೂ ಯುವತಿಯರು ತಮ್ಮ ಜೀವನದ ಮಹತ್ವದ ನಿರ್ಧಾರ ಸೂಕ್ತವಾಗಿ ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಸರಳಾಬಾಯಿ ಭಾಂಡಗೆ ಮಾತನಾಡಿ ಸಮಾಜದಲ್ಲಿ ಯುವಕ-ಯುವತಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ‘ಕುಟುಂಬದ ಮೂಲ ಮೌಲ್ಯ ಉಳಿಸಲು ಪಾಲಕರೂ ಸಮಾನ ಜವಾಬ್ದಾರಿ ಹೊತ್ತಿರಬೇಕು. ಉತ್ತಮ ಸಂಸ್ಕಾರ ಮತ್ತು ಶಿಸ್ತಿನ ಮೂಲಕವೇ ಸಮುದಾಯದ ಪ್ರಗತಿ ಸಾಧ್ಯ’ ಎಂದರು.

ಬಾಬು ಬಾಕಳೆ, ಅಧ್ಯಕ್ಷತೆ ವಹಿಸಿದ್ದ ಭಗೀರಥಸಾ ಪಾಟೀಲ ಮಾತನಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿಠಲಸಾ ಶಿಂಗ್ರಿ, ಸುರೇಶ ರಾಯಬಾಗಿ, ಮಾರುತಿಸಾ ರಂಗ್ರೇಜ, ಸರಳಾಬಾಯಿ ಭಾಂಡಗೆ, ಡಿ.ಸಿ. ಬಾಕಳೆ, ಬಾಬು ಬಾಕಳೆ, ಸರೋಜಾಬಾಯಿ ಶಿಂಗ್ರಿ, ರವಿಂದ್ರಸಾ ಬಾಕಳೆ, ಎಲ್ಲೂಸಾ ಬಾಕಳೆ, ರಾಜು ಮಿಸ್ಟೀನ್, ಭೀಮಸಾ ದೇವಳೆ, ಹನುಂತಸಾ ರಾಯಬಾಗಿ ಮಹಿಳಾ ಮಂಡಳ ಹಾಗೂ ಯುವಕ ಮಂಡಳ ಸದಸ್ಯರು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-35-1351710865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.