ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ತಾಣ ಶ್ಯಾಮೀದ್ ಅಲಿ ದರ್ಗಾ: ಊರಿನವರ ಹೆಸರಿನಲ್ಲಿ ‘ಶ್ಯಾಮ’ ಸಾಮಾನ್ಯ!

Last Updated 29 ಏಪ್ರಿಲ್ 2022, 2:48 IST
ಅಕ್ಷರ ಗಾತ್ರ

ತಾವರಗೇರಾ: ಪಟ್ಟಣದ ಆರಾಧ್ಯ ದೈವ ಶ್ಯಾಮೀದ್ ಅಲಿ ದರ್ಗಾ ಹಿಂದೂ–ಮುಸ್ಲಿಮರ ಸಾಮರಸ್ಯದ ತಾಣವಾಗಿದೆ.

ಐತಿಹಾಸಿಕ ದರ್ಗಾದಲ್ಲಿ ಹಿಂದೂ– ಮುಸ್ಲಿಮರ ಏಕತೆ ಸಾರುವ ಸಂಪ್ರದಾಯವನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪಟ್ಟಣದ ಹಿಂದೂ ಸಮುದಾಯದರು ತಮ್ಮ ಮಕ್ಕಳಿಗೆ ಮೊದಲಿನಿಂದಲೂ ಶ್ಯಾಮಣ್ಣ, ಶ್ಯಾಮಪ್ಪ, ಶ್ಯಾಮ್, ಶ್ಯಾಮ್ ಸುಂದರ, ಶ್ಯಾಮೂರ್ತಿ, ಸಣ್ಣ ಶ್ಯಾಮಣ್ಣ, ದೊಡ್ಡ ಶ್ಯಾಮಣ್ಣ.... ಹೆಣ್ಣು ಮಕ್ಕಳಾದರೆ ಶ್ಯಾಮವ್ವ, ಶ್ಯಾಮಲಾ, ಶ್ಯಾಮಲಾಬಾಯಿ, ಸಣ್ಣ ಶ್ಯಾಮವ್ವ, ದೊಡ್ಡ ಶ್ಯಾಮವ್ವ ಎಂದು ಹೆಸರಿಡುತ್ತಾರೆ.

ಮುಸ್ಲಿಂ ಸಮುದಾಯದವರು ಶ್ಯಾಮೀದ್ ಸಾಬ್, ಶ್ಯಾಮೀದ್ ಅಲಿ, ಶ್ಯಾಮೀದ್, ಶ್ಯಾಮೀದ್ ಬೀ... ಎಂಬ ಹೆಸರನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ಈ ಮೂಲಕ ಎರಡೂ ಧರ್ಮೀಯರು ಶ್ಯಾಮೀದ್ ಅಲಿಯನ್ನು ಆರಾಧಿಸಿ ಪೂಜಿ ಸುತ್ತಾರೆ. ಬೇಡಿದ ವರ ಕರುಣಿಸುತ್ತಾನೆ ಎಂಬ ನಂಬಿಕೆ ದರ್ಗಾ ಭಕ್ತರದು.

600ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಶ್ಯಾಮೀದ್ ಅಲಿ ದರ್ಗಾಕ್ಕೆ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮದವರು ಭೇಟಿ ನೀಡುತ್ತಾರೆ. ಎಲ್ಲಾ ಸಮುದಾಯವರ ಪಾಲಿಗೆ ಇದೊಂದು ಸಾಮರಸ್ಯದ ನೆಲೆಯಾಗಿದೆ. ಉರುಸ್ ಆಚರಣೆಗೆ ಸುತ್ತಲಿನ ಜಿಲ್ಲೆ, ನೆರೆಯ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.

’ಪ್ರತಿ ಗುರುವಾರ ಹಾಗೂ ಅಮವಾಸ್ಯೆಯಂದು ಭಕ್ತರ ದಟ್ಟಣೆ ಹೆಚ್ಚಿರುತ್ತದೆ. ಮೂರು ದಿನ ನಡೆಯುವ ಉರುಸ್‌ಗೆ ಸಾವಿರಾರು ಭಕ್ತರು ಬಂದು ತಮ್ಮ ಹರಕೆ ತೀರಿಸುತ್ತಾರೆ. ಶ್ಯಾಮೀದ್ ಅಲಿ ಪವಾಡ ಮತ್ತು ಭಕ್ತರ ಕಷ್ಟಗಳನ್ನು ಪರಿಹರಿಸುವ ದೈವ ಎಂಬ ನಂಬಿಕೆಯಿಂದ ಭಕ್ತರು ನಮಿಸುತ್ತಾರೆ‘ ಎಂದು ಗ್ರಾಮಸ್ಥ ಕೆ. ಶರಣಬಸವ ನವಲಹಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT