ಗಂಗಾವತಿ: ತಾಲ್ಲೂಕಿನ ಹಿರೇಬೆಣಕಲ್ನಲ್ಲಿರುವ ಪ್ರಾಚೀನ ಬೃಹತ್ ಶಿಲಾಯುಗದ (ಮೆಗಾಲಿಥಿಕ್) ನೆಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿರೇಬೆಣಕಲ್ನಲ್ಲಿರುವ ಐತಿಹಾಸಿಕ ನೆಲೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಈ ತಾಣವನ್ನು ಪ್ರವಾಸಿಗರ ಮತ್ತು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

‘ನಾಡಿನ ಈ ಬೃಹತ್ ಶಿಲಾಯುಗದ ನೆಲೆ ಕೊಪ್ಪಳ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಈ ತಾಣದ ಸಂರಕ್ಷಣೆಗೆ ಆದ್ಯತೆ ನೀಡಿದ್ದೇವೆ. ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳ ರಕ್ಷಣೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ₹80 ಲಕ್ಷ ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಿಂದ ಹಿರೇಬೆಣಕಲ್ ನೆಲೆಯ ಕೆಳಭಾಗದವರೆಗೆ ಸುಗಮ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಅರಣ್ಯ ಅಧಿಕಾರಿ ನಿರ್ಮಲಾ ಅವರಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಗಂಗಾವತಿ ಬಸಾಪಟ್ಟಣ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಉಮೇಶ್ವರ್, ಗಸ್ತು ಅರಣ್ಯಪಾಲಕ ಮಂಜುನಾಥ ನರೇರ, ಶಿವಕುಮಾರ ವಾಲಿ, ಶಿವಾನಂದ ತಳವಾರ, ಮಾಜಿ ಶಾಸಕ ಮುರಳೀಧರ, ಮಾರ್ಗದರ್ಶಕ ಮಂಜುನಾಥ ಗುಡ್ಲಾನೂರ, ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ, ವೀರೇಶ ಅಂಗಡಿ, ಬಸನಗೌಡ ಹೊಸಹಳ್ಳಿ, ಮಂಜುನಾಥ ಡಿ, ಚಂದ್ರಶೇಖರ, ಎಚ್. ಭಾಷಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.