ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ; ಬಣ್ಣದಲ್ಲಿ ಮಿಂದೆದ್ದ ಮಹಿಳೆಯರು, ಮಕ್ಕಳು

Last Updated 20 ಮಾರ್ಚ್ 2022, 5:39 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶನಿವಾರ ಹೋಳಿ ಹಬ್ಬವನ್ನು ಸಂಭ್ರಮವಾಗಿ ಆಚರಿಸಲಾಯಿತು.

ಈ ಬಾರಿ ಕಾಮದಹನವನ್ನು ಗುರುವಾರ ಮತ್ತು ಶುಕ್ರವಾರ ನಡೆಯಿತು. ಶನಿವಾರ ರಂಗಿನಾಟ ಜೋರಾಗಿದ್ದು ಮಕ್ಕಳು, ಮಹಿಳೆಯರು, ಯುವಕರು ಸ್ನೇಹಿತರೊಂದಿಗೆ ತರಹೆವಾರಿ ಬಣ್ಣಗಳನ್ನು ಎರಚಿ ಹಬ್ಬ ಆಚರಿಸಿದರು. ಪ್ರತಿಯೊಂದು ಓಣಿ, ರಸ್ತೆಗಳಲ್ಲಿ ಜನರು ಬಣ್ಣಗಳಲ್ಲಿ ಮಿಂದೆದದ್ದು ಸಾಮಾನ್ಯವಾಗಿತ್ತು.

ಹೋಳಿ ಹಬ್ಬದಲ್ಲಿ ಕೆಲವು ಅಪಸ್ವರಗಳು ಕೇಳಿಬಂದವು. ಕೆಲವು ಯುವಕರು, ಸಂಘಟನೆಗಳ ಕಾರ್ಯಕರ್ತರು, ಕೆಲ ಸರ್ಕಾರಿ, ಖಾಸಗಿ ಕಚೇರಿ, ಬ್ಯಾಂಕ್‌ ಉದ್ಯೋಗಿಗಳು ಬಣ್ಣದ ಹಬ್ಬದಲ್ಲಿ ಕೋಳಿಮೊಟ್ಟೆ, ಟೊಮೆಟೊ ಹಣ್ಣು ಬಳಸಿದ್ದು ಕಂಡು ಬಂತು.

ತಲೆಯ ಮೇಲೆ ಕೋಳಿ ಮೊಟ್ಟೆ ಇಟ್ಟು ಒಡೆದು, ರಾಸಾಯನಿಕ ಬಣ್ಣಗಳನ್ನು ಹಾಕುವುದು ಸಾಮಾನ್ಯವಾಗಿತ್ತು. ಕೋಳಿಮೊಟ್ಟೆಗಳ ತ್ಯಾಜ್ಯ, ಬಣ್ಣ ಮಿಶ್ರಿತ ದುರ್ವಾಸನೆಯ ನೀರು ಖಾಸಗಿ ಬ್ಯಾಂಕ್‌ ಕಚೇರಿ ಮುಂದೆ ಹರಿದದ್ದು ಕಂಡುಬಂತು. ಇದಕ್ಕೆ ಸ್ಥಳೀಯ ನಿವಾಸಿಗರು ಬೇಸರ ವ್ಯಕ್ತಪಡಿಸಿದರು.

ಜನರಿಗೆ ಕಿಡಿಗೇಡಿಗಳು ಒತ್ತಾಯಪೂರ್ವಕವಾಗಿ ಬಣ್ಣ ಹಾಕಲು ಯತ್ನಿಸಿದ್ದರು. ಗ್ರಾಮೀಣ ಭಾಗದಿಂದ ಬಂದಿದ್ದ ರೈತರು, ಜನರ ಮೇಲೆ ಬಣ್ಣ ಎರಚಲಾಯಿತು. ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಬೇಸರಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT